ಮಂಜೇಶ್ವರ: ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತೂಮಿನಾಡು ಸಾಹಿತ್ಯ ಪ್ರೇಮಿಗಳ ಉತ್ಸಾಹದಿಂದ ಚಿಗುರೊಡೆದ ಕುಂಜತ್ತೂರು ಸಾಹಿತ್ಯ ಕೂಟದ ನಾಲ್ಕನೇ ವಾರ್ಷಿಕೋತ್ಸವ ಭಾನುವಾರ ತೂಮಿನಾಡು ಮಹಾಕಾಳಿ ರಸ್ತೆಯಲ್ಲಿರುವ ಸುಪರ್ಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವೈದ್ಯ ಡಾ.ಕೆ.ಎ ಖಾದರ್ ಉದ್ಘಾಟಿಸಿದರು. ಸೋಮನಾಥ.ಬಿ. ವರದಿ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಗ್ರಾಹಕರ ವೇದಿಕೆಯ ಅಧ್ಯಕ್ಷ ಮುರಳೀಧರ ಭಟ್, ಆನಂದ ಮಾಸ್ತರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಾಹಿತ್ಯವೇದಿಕೆಯ ಸ್ಥಾಪಕಾಧ್ಯಕ್ಷ, ನಿವೃತ ತಹಶೀಲ್ದಾರ್ ಕೆ.ಪಿ. ಸೋಮಶೇಖರ, ಕೃಷ್ಣಪ್ಪ ಪೂಜಾರಿ ಸಹಿತ ಗಣ್ಯರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ಹೊಸ ವರ್ಷದ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಬಳಿಕ ಸದಸ್ಯರುಗಳಿಂದ ಅಂತ್ಯಾಕ್ಷರಿ, ರಸಪ್ರಶ್ನೆ, ಮಹಿಳಾ ಸದಸ್ಯರಿಂದ ನೃತ್ಯ ವೈವಿದ್ಯಗಳು ನಡೆಯಿತು. ನಾರಾಯಣ ಮಾಸ್ತರ್ ಸ್ವಾಗತಿಸಿ, ಜಯಚಂದ್ರ ವಂದಿಸಿದರು.