ಕುಂಬಳೆ: ಕುಂಬಳೆ ಕೊೈಯಿಪ್ಪಾಡಿ ಕಡಪ್ಪರ, ಬಂಬ್ರಾಣ, ಕಳತೂರು ಚೆಕ್ ಪೋಸ್ಟ್,ಕೊಡ್ಯಮೆ ಹಾಗು ಕುಂಬಳೆ ಪೇಟೆ ಹಾಗು ಶಾಲೆ ಸಮೀಪ ಪ್ರದೇಶದಲ್ಲಿ ವ್ಯಾಪಕವಾಗಿ ಮಾದಕ ವಸ್ತು ಮತ್ತು ನಿಷೇದಿತ ವಸ್ತುಗಳು ಮಾರಾಟ ಮಾಡುವ ಮೂಲಕ ಹಲವಾರು ಯುವಕರು ಹಾಗು ವಿದ್ಯಾರ್ಥಿಗಳು ಇದರ ಚಟಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಕುಂಬಳೆ ಬಿಜೆಪಿ ಪಂಚಾಯತಿ ಸಮಿತಿ ಆರೋಪಿಸಿದೆ. ಇದರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸಮಿತಿ ಅಧ್ಯಕ್ಷ ಕೆ.ಶಂಕರ ಆಳ್ವ ಅವರು ಘಟಕದ ಕಚೇರಿಯಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಮಂಡಲ ಉಪಾಧ್ಯಕ್ಷ ವಿನೋದನ್, ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್, ಜಿಲ್ಲಾ ಸಮಿತಿ ಸದಸ್ಯ ಕೆ.ರಮೇಶ್ ಭಟ್, ಮಂಡಲ ಸಮಿತಿ ಸದಸ್ಯ ಮಹೇಶ್ ಪುಣಿಯೂರ್, ಜನಪ್ರತಿನಿಧಿಗಳಾದ ಸುಜಿತ್ ರೈ, ಹರೀಶ್ ಗಟ್ಟಿ, ಪ್ರೇಮಲತಾ, ಪುಷ್ಪಲತಾ, ಹಿರಿಯ ನೇತಾರರಾದ ಕಮಲಾಕ್ಷ, ಬಾಬು ಗಟ್ಟಿ, ಗೋಪಾಲ ಪೂಜಾರಿ , ಪೂಜಾರಿ, ಮಧುಸೂದನ್ ದೇವಿನಗರ ಉಪಸ್ಥಿತರಿದ್ದರು. ಪಂಚಾಯತಿ ಪ್ರದಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಮೋಹನ ಬಂಬ್ರಾಣ ವಂದಿಸಿದರು.