ಮಧೂರು: ಬಂಟರ ಸಂಘದ ಮಧೂರು ಪಂಚಾಯತಿ ಘಟಕದ ಆಶ್ರಯದಲ್ಲಿ ಸಿರಿಬಾಗಿಲು ಪ್ರಾದೇಶಿಕ ಘಟಕದ ರೂಪೀಕರಣ ಸಭೆಯು ಕಜೆ ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ ಪಂಚಾಯತಿ ಘಟಕದ ಅಧ್ಯಕ್ಷ ಕುತ್ತಾರು ಗುತ್ತು ರಾಮಕೃಷ್ಣ ಆಳ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟರು ಇಂದು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಾಣಲು ಹಾಗು ಹಕ್ಕುಗಳಿಗೆ ಹೋರಾಡಲು ಸಮಾಜದವರು ಒಂದು ಗೂಡಬೇಕಾದ ಅನಿವಾರ್ಯತೆ ಬಗ್ಗೆ ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ವಿವರಿಸಿದರು. ಪಂಚಾಯತಿ ಘಟಕದ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಅಡ್ಕ, ಕಾರ್ಯದರ್ಶಿ ಗಣೇಶ ರೈ ನಾಯಕ್ಕೋಡು, ಕಣ್ಣೂರು ಗುತ್ತು ನಾರಾಯಣ ಶೆಟ್ಟಿ ಕಜೆ, ಜಯಂತಿ ಕೆ.ರೈ ಮುಂತಾದವರು ಮಾತನಾಡಿದರು.
ಬಳಿಕ ಸಿರಿಬಾಗಿಲು ಪ್ರಾದೇಶಿಕ ಸಮಿತಿಯನ್ನು ರೂಪೀಕರಿಸಲಾಯಿತು.ಅಧ್ಯಕ್ಷರಾಗಿ ಕಣ್ಣೂರುಗುತ್ತು ನಾರಾಯಣ ಶೆಟ್ಟಿ, ಉಪಾಧ್ಯಕ್ಷರಾಗಿ ಶೀನ ಶೆಟ್ಟಿ, ಕಜೆ ರವೀಂದ್ರ ಶೆಟ್ಟಿ ಪಾಲ್‍ತೋಡು, ರವೀಂದ್ರ ರೈ ಪಾರೆಹಿತ್ತಿಲು, ಪ್ರಧಾನ ಕಾರ್ಯದರ್ಶಿಯಾಗಿ ನವನೀತ ರೈ ಕಜೆ, ಕಾರ್ಯದರ್ಶಿಯಾಗಿ ನಿತಿನ್ ರೈ ನೀರಾಳ, ಕೋಶಾಧಿಕಾರಿಯಾಗಿ ಅನಿಲ್ ಪಕಳ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಮೋದಿನಿ ಆರ್.ಶೆಟ್ಟಿ ಕಜೆ, ಅನಿತಾ ಶೆಟ್ಟಿ ಅಡ್ಕ, ದಿವ್ಯಾ ಅಡ್ಕ, ಸುರೇಖ ಸುಜಾತ ಶೆಟ್ಟಿ ಮತ್ತಿತರರನ್ನು ಆಯ್ಕೆಮಾಡಲಾಯಿತು.