ಸಮರಸ ಚಿತ್ರ ಸುದ್ದಿ: ಉಪ್ಪಳ: ಬಾಯಾರುಪದವು ಸಮೀಪದ ಕನಿಯಾಲ ಉಳ್ಳಾಲ್ತಿ ಬನದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಾರಿ ತಂಬಿಲ ಕಾರ್ಯಕ್ರಮ ಬುಧವಾರ ಸಾಯಂಕಾಲ ನಡೆಯಿತು. ತಂತ್ರಿ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಜರುಗಿದ ವಿಶೇಷ ತಂಬಿಲದಲ್ಲಿ ಗೋಕ್ಷೇಮ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗವಹಿಸಿದ್ದರು.