ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಮೇ. 23 ರಿಂದ 28 ವರೆಗೆ ನಡೆಯಲಿರುವ ದ್ರವ್ಯಕಲಶ ಮಹೋತ್ಸವದ ಹಿನ್ನೆಲೆಯಲ್ಲಿ ಮೇ.23 ರಂದು ಬೆಳಿಗ್ಗೆ 9 ಗಂಟೆಗೆ ಕೋಟೂರು ಶ್ರೀಕಾರ್ತಿಕೇಯ ಭಜನಾ ಮಂದಿರದಿಂದ ಚೆಂಡೆ ವಾದ್ಯ ಘೋಷಗಳೊಂದಿಗೆ ವೈಭವಯುತ ಉಗ್ರಾಣ ತುಂಬಿಸುವ ಘೋಷಯಾತ್ರೆಯು ಶ್ರೀ ಕ್ಷೇತ್ರ ಸನ್ನಿಧಿಗೆ ಸಾಗಲಿದೆ.
ಘೋಷಯಾತ್ರೆಯ ಯಶಸ್ವಿಗಾಗಿ ಸ್ವಾಗತ ಸಮಿತಿ ರೂಪೀಕರಣ ಸಭೆ ಕೋಟೂರಿನಲ್ಲಿ ಮಂಗಳವಾರ ಜರಗಿತು. ಸೋಮಶೇಖರ ಬಳ್ಳುಳ್ಳಾಯ ಅವರು ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ಗೋಪಾಲನ್ ಕೋಟೂರು, ಗೀತಾ ಗೋಪಾಲನ್ ಕೋಟೂರು ಕಾರ್ಯಕ್ರಮದ ಯಶಸ್ವಿಗೆ ಬೇಕಾದ ಮಾಹಿತಿಗಳನ್ನಿತ್ತರು.
ಗೋವಿಂದ ಬಳ್ಳಮೂಲೆ ಅವರು ದ್ರವ್ಯಕಲಶ ಮಹೋತ್ಸವ, ಪೂರ್ಣ ಕುಂಭ ಸ್ವಾಗತ , ಉಗ್ರಾಣ ತುಂಬಿಸುವ ಘೋಷಯಾತ್ರೆ ಮೊದಲಾದ ಕಾರ್ಯಕ್ರಮಗಳ ಕುರಿತಾಗಿ ಸಮಗ್ರ ಮಾಹಿತಿಗಳನ್ನಿತ್ತರು. ಮಾತೃ ಸಮಿತಿಯ ಸಂಚಾಲಕಿ ಅಂಬಿಕಾ ಪಾತನಡ್ಕ ಘೋಷಯಾತ್ರೆಯ ವಿಧಾನದ ಬಗ್ಗೆ ವಿವರಣೆಗಳನ್ನಿತ್ತರು. ಬಾಲಕೃಷ್ಣ ಕೋಟೂರು ವಂದಿಸಿದರು.