HEALTH TIPS

ಆರು ತಿಂಗಳ ನಂತರ ಕೇದಾರನಾಥ ದೇಗುಲ ದರ್ಶನ ಆರಂಭ

           

       ಉತ್ತರಾಖಾಂಡ್: ಉತ್ತರಾಖಂಡದ ಗರ್ವಾಲ್ ಹಿಮಾಲಯ ಪರ್ವತ ಶ್ರೇಣಿಗಳಲ್ಲಿರುವ ನಿಸರ್ಗ ರಮಣೀಯ ಕೇದಾರನಾಥ ದೇಗುಲದ ಬಾಗಿಲುಗಳನ್ನು ಗುರುವಾರ ಬೆಳಗ್ಗೆ 6.15ರ ಸುಮಂಳಗಕರ ಮುಹೂರ್ತದಲ್ಲಿ ತೆರೆಯಲಾಯಿತು.
    ಶಿವನ ದೇಗುಲದ ಬಾಗಿಲುಗಳನ್ನು ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು. ಹಿಂದುಗಳ ಪಾಲಿನ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಕೇದಾರನಾಥ ದೇಗುಲ ಗುರುವಾರ ಆರಂಭವಾಗಿದ್ದರೆ, ಗಂಗೋತ್ರಿ, ಯಮುನೋತ್ರಿ ಧಾಮ್‍ಗಳಲ್ಲಿ ಮಂಗಳವಾರಿದಂದಲೇ ಯಾತ್ರಿಗಳಿಗೆ ದರ್ಶನ ಭಾಗ್ಯ ಕಲ್ಪಿಸಿದೆ. ಬದರಿನಾಥ್ ದೇಗುಲದ ಬಾಗಿಲು ಮುಂದಿನ ಬುಧವಾರ ತೆರೆಯಲಾಗುವುದು. ಇದಾದ ನಂತರ ಯಾತ್ರಿಗಳಿಗೆ ಚಾರ್‍ಧಾಮ್ ಯಾತ್ರೆಗೆ ಅವಕಾಶ ದೊರೆಯಲಿದೆ.
    5,100 ವರ್ಷ ಪುರಾತನವಾದ ಈ ದೇಗುಲದಲ್ಲಿ ಅಖಂಡ ಜ್ಯೋತಿಯನ್ನು ಇಂದು ಯಾತ್ರೆಇಗಳು ನೋಡಬಹುದಾಗಿದೆ. ಕೌರವರ ಮೇಲಿನ ಯುದ್ಧದ ನಂತರ ಪಾಂಡವರು ಮೋಕ್ಷಕ್ಕಾಗಿ ಇಲ್ಲಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಶಿವ ಪಶು ಅವತಾರ ಎತ್ತಿದ್ದ ಎಂಬ ಪ್ರತೀತಿ ಇದೆ ಎಂದು ಹಿರಿಯ ಪುರೋಹಿತರು ಮಾಹಿತಿ ನೀಡಿದ್ದಾರೆ. ಕೇದಾರನಾಥ ದೇಗುಲ ಸಮುದ್ರ ಮಟ್ಟಕ್ಕಿಂತ 11,755 ಅಡಿ ಎತ್ತರದಲ್ಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries