HEALTH TIPS

ಭಯ ಪಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ=ಡಾಕ್ಯುಮೆಂಟರಿ ಲೋಕಾರ್ಪಣೆ


    ಕಾಸರಗೋಡು: ಆನೆಕಾಲು ರೋಗ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿ ಐಎಡಿ ನಿರ್ವಹಿಸುವ ಕಾರ್ಯಚಟುವಟಿಕೆಗಳು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸಂಯೋಜಿತ ಚಿಕಿತ್ಸಾ ವ್ಯವಸ್ಥೆಯೆಂಬ ನೂತನ ಪರಿಕಲ್ಪನೆಯಡಿ ಐಎಡಿಯ ಚಿಕಿತ್ಸಾ ಕಳಕಳಿ ಮಾದರಿಯಾಗಿದ್ದು, ಇನ್ನಷ್ಟು ಯೋಜನೆಗಳು ರೋಗ ಶಮನಕ್ಕೆ ಈ ಮೂಲಕ ಲಭ್ಯವಾಗಿ ಸುಂದರ ಸಮಾಜ ನಿರ್ಮಾಣಕ್ಕೆ ದಾರಿಯಾಗಲಿ ಎಂದು ಸಿಸಿಆರ್‍ಎಎಸ್ (ಭಾರತ ಸರಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕಲ್ ಸೈನ್ಸ್)ನಿರ್ದೇಶಕ ಡಾ.ಪ್ರೊ. ಕೆ.ಎಸ್. ದಿಮನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಉಳಿಯತ್ತಡ್ಕದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟೋಲಜಿ(ಐಎಡಿ) ನೇತೃತ್ವದಲ್ಲಿ ಸಿದ್ದಪಡಿಸಲಾದ "ಆನೆಕಾಲು ರೋಗಕ್ಕೆ ಭಯಪಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ" ಎಂಬ ಆಂದೋಲನದ ವೀಡಿಯೋ ಡಾಕ್ಯುಮೆಂಟರಿ ಯನ್ನು ಶನಿವಾರ ಉಳಿಯತ್ತಡ್ಕದ ಐಎಡಿ ಆವರಣದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
    ಆನೆಕಾಲು ರೋಗ ನಿಯಂತ್ರಣ, ಚಿಕಿತ್ಸಾ ಸೌಲಭ್ಯಗಳಿಗಾಗಿ ಐಎಡಿ ನಡೆಸುತ್ತಿರುವ ಸೇವೆ ಆಶಾಕಿರಣವಾಗಿದೆ. ಇನ್ನಷ್ಟು ಚಿಂತನೆಗಳು ಈ ಮೂಲಕ ಮೂಡಿಬರಲಿ ಎಂದು ಅವರು ತಿಳಿಸಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
   ಕೋಲ್ಕತ್ತಾದ ಸಿಎಆರ್‍ಆರ್‍ಐಡಿಯ ಆರೋಗ್ಯ ಔಷಧ ಶಾಸ್ತ್ರಾ ಅಧಿಕಾರಿ ಡಾ.ಅಚಿಂತ್ಯ ಮಿತ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಐಎಡಿಯ ಚಿಕಿತ್ಸಾ ಸೌಲಭ್ಯ ರಾಷ್ಟ್ರಾದ್ಯಂತ ಲಭ್ಯವಾಗಲಿ ಎಂದು ಹಾರೈಸಿದರು.
   ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿ, ಡಾ.ಪ್ರಸನ್ನಾ ನರಹರಿ ಉಪಸ್ಥಿತರಿದ್ದರು. ಐಎಡಿ ಆಡಳಿತಾಧಿಕಾರಿ ಪ್ರಜುಲ್ ಸ್ವಾಗತಿಸಿ, ಡಾ.ಎಸ್.ಆರ್.ನರಹರಿ ವಂದಿಸಿದರು.
   ಆನೆಕಾಲು ರೋಗ ನಿಯಂತ್ರಣ, ಚಿಕಿತ್ಸೆಗಳ ಬಗ್ಗೆ ಡಾಕ್ಯುಮೆಂಟರಿಯಲ್ಲಿ ವಿವರಿಸಲಾಗಿದ್ದು, ಈ ಬಗ್ಗೆ ಆತಂಕಿತರಾಗಿರುವ ರೋಗಿಗಳಿಗೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಸಾಮಾಜಿಕ ಮಾದ್ಯಮಗಳ ಮೂಲಕ ತಲಪಿಸುವ ನಿಟ್ಟಿನಲ್ಲಿ ಐಎಡಿ ಶೀಘ್ರ ವ್ಯವಸ್ಥೆಗೊಳಿಸಲಿದೆ ಎಂದು ಈ ಸಂದರ್ಭ ಪ್ರಕಟಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries