ಕಾಸರಗೋಡು: ಬೇಕಲ ತಲ್ಲಾಣಿ ಜಾಲುಮನೆ ಶ್ರೀ ಕಾಲಬೈರವೇಶ್ವರ, ಅಮ್ಮನವರ ದೇವಸ್ಥಾನದಲ್ಲಿ ಚಂಡಿಕಾ ಹೋಮ, ಸಾಮೂಹಿಕ ಬ್ರಹ್ಮೋಪದೇಶ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ಮೇ 8 ರಂದು ಗಣಪತಿ ಪೂಜೆ, ಸಂಕಲ್ಪ, ಋತ್ವಿಕ್ ವರ್ಣ, ಪುಣ್ಯಾಹ, ಸ್ವಸ್ತಿ ವಾಚನ, ಶ್ರೀ ಸಪ್ತಶತಿ ಪಾರಾಯಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಕಲಶ ಪ್ರತಿಷ್ಠೆ ನಡೆಯಿತು. ಮೇ 9 ರಂದು ಮರಕಡ ಗುರುಪರಾಶಕ್ತಿ ಮಠದ ಪರಮಪೂಜ್ಯ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಅವರಿಂದ ಆಶೀರ್ವಚನ, ಮಹಾಗಣಪತಿ ಹೋಮ, ಚಂಡಿಕಾ ಹೋಮ, ಕನ್ನಿಕಾಪೂಜೆ, ದಂಪತಿ ಪೂಜೆ ಜರಗಿತು.
ಮೇ 10 ರಂದು ಕುಲ ಪುರೋಹಿತರಾದ ಬ್ರಹ್ಮಶ್ರೀ ಉಡುಪಿ ಮಾಧವ ಭಟ್ ಅವರ ಆಶೀರ್ವಾದ ಹಾಗು ಬ್ರಹ್ಮಶ್ರೀ ಉಡುಪಿ ನಾಗೇಶ್ ಭಟ್ ಅವರ ನೇತೃತ್ವದಲ್ಲಿ ಸಾಮೂಹಿತ ಬ್ರಹ್ಮೋಪದೇಶ ನಡೆಯಿತು.