ಕಾಸರಗೋಡು: ಕಳನಾಡು ಮರಬೈಲು ಕಾವೇರಿತೋಟದ ಶ್ರೀ ಆದಿಶಕ್ತಿ ಕಾಲಭೈರವೇಶ್ವರ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣ ಯಾಗ, ನವ ಚಂಡಿಕಾ ಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ಮಂಗಳವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಸಹಸ್ರ ನಾಳಿಕೇರ ಗಣಯಾಗ ಹಾಗು ನವ ಚಂಡಿಕಾ ಯಾಗ, ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನವ ಚಂಡಿಕಾ ಯಾಗ ಪೂರ್ಣಾಹುತಿ, ಸಹಸ್ರ ನಾಳಿಕೇರ ಗಣಯಾಗ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಇದೇ ಸಂದರ್ಭದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಹಾಗು ಅವರಿಂದ ತರಬೇತುಗೊಂಡ ಮಹಿಳಾ ಭಜನಾ ತಂಡದಿಂದ ದಾಸಸಂಕೀರ್ತನೆ ನಡೆಯಿತು.