HEALTH TIPS

ಪೆರ್ಮುದೆ ಸಾಂತಾ ಲಾರೆನ್ಸರ ದೇವಾಲಯದ ಉದ್ಘಾಟನೆ

      ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ ಮಂಗಳವಾರ ವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಇಗರ್ಜಿಯ ಪ್ರವೇಶ ದ್ವಾರದ ಬಳಿ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಅವರು ಹೂವುಮಾಲೆ ಹಾಕುವುದರ ಮೂಲಕ ನೂತನ ದೇವಾಲಯಕ್ಕೆ ಸ್ವಾಗತಿಸಿದರು.
    ಬಳಿಕ ಬ್ಯಾಂಡ್ ಮೇಳ, ಮುತ್ತುಕೊಡೆಗಳ ವೈಭವದೊಂದಿಗೆ ಮೆರವಣಿಗೆಯ ಮೂಲಕ ಧರ್ಮಾಧ್ಯಕ್ಷರನ್ನು ನೂತನ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ನೂತನ ಘಂಟಾಗೋಪುರವನ್ನು ಡೊಮಿನಿಕನ್ ಪ್ರೊವಿನ್ಶಿಯಲ್ ಫಾ. ನವೀನ್ ಸಲ್ಡಾನ್ಹಾ ಉದ್ಘಾಟಿಸಿದರು. ಧರ್ಮಾಧ್ಯಕ್ಷರು ನೂತನ ಘಂಟಾಗೋಪುರದ ಘಂಟೆಯನ್ನು ಬಾರಿಸಿ ಆಶೀರ್ವಚಿಸಿದರು. ನೂತನ ದೇವಾಲಯದ ಕಟ್ಟಡವನ್ನು ಡೊಮಿನಿಕನ್ ಪ್ರೊವಿನ್ಶಿಯಲ್ ಫಾ. ನವೀನ್ ಸಲ್ಡಾನ್ಹಾ ಹಾಗೂ ಬಿಷಪರು ಉದ್ಘಾಟಿಸಿದರು. ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನೂತನ ದೇವಾಲಯದ ಆಶೀರ್ವಚನ ನಡೆಸಿದರು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ. ಜೋನ್‍ವಾಸ್, ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ. ವಿಕ್ಟರ್ ಡಿಸೋಜ ಉಪಸ್ಥಿತರಿದ್ದರು. ಕಾಸರಗೋಡು ಧರ್ಮವಲಯದ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಇಗರ್ಜಿಗಳ ಧರ್ಮಗುರುಗಳು, ಡೊಮಿನಿಕನ್ ಮೇಳದ ದರ್ಮಗುರುಗಳ ಜೊತೆಗೂಡಿ ನೂತನ ಇಗರ್ಜಿಯ ಪ್ರಥಮ ದಿವ್ಯಬಲಿಪೂಜೆಯನ್ನು ಧರ್ಮಾಧ್ಯಕ್ಷ  ಪೀಟರ್ ಪಾವ್ಲ್ ಸಲ್ಡಾನ್ಹಾ ನೆರವೇರಿಸಿದರು. ಫಾ. ಮೆಲ್ವಿನ್ ಫೆರ್ನಾಂಡಿಸ್ ಪವಿತ್ರ ಬೈಬಲ್ ವಾಚಿಸಿದರು. ಧರ್ಮಾಧ್ಯಕ್ಷರು ಶುಭವಾರ್ತೆಯ ಸಂದೇಶ ನೀಡಿ ಕ್ರಿಸ್ತನ ದೇಹದಿಂದ ಜನ್ಮ ನೀಡಿದ ನಮ್ಮ ದೇಹ ನಾಶಗೊಳಿಸಲು ಅವರು ಬಿಡರು. ನಮ್ಮನ್ನು ಹೊಸದಾಗಿ ರೂಪಿಸುವರು. ದೇವರ ಮಹಿಮೆಯನ್ನು ಸಾರಲು ಇಡೀ ಸೃಷ್ಟಿ ಇದ್ದರೂ ದೇವರ ಪ್ರೀತಿಯಿಂದ ನಾವು ನಿರ್ಮಿಸಿದ ಪುಟ್ಟ ಮಂದಿರದಲ್ಲಿ ಅವರು ಇರಲು ಆಶಿಸುತ್ತಾರೆ ಎಂದರು. ಎಲ್ಲ ಸಾಂತಾರನ್ನು ಸ್ಮರಿಸಿ ಸ್ತುತಿಸಲಾಯಿತು. ಪರಮ ಪ್ರಸಾದದ ತಬೆರ್ನಾಕ್ಲ್ ಆಶೀರ್ವಚನ ನಡೆಯಿತು. ಫಾ. ವಿಜಯ್ ಮಚಾದೊ ನಿರೂಪಿಸಿದರು. ಫಾ. ಪ್ರತೀಕ್ ಪಿರೇರಾ, ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಸೇವೆಸಲ್ಲಿಸಿದ ಧರ್ಮಗುರುಗಳಾದ ಫಾ. ಲೋರೆನ್ಸ್ ರೋಡ್ರಿಗಸ್, ಫಾ. ಅನಿಲ್ ಡಿಸೋಜ, ಡೊಮಿನಿಕನ್ ಮೇಳದ ಫಾ. ಸುನಿಲ್ ಲೋಬೋ ಕೊಲ್ಲಂಗಾನ, ಕಾಸರಗೋಡು ವಲಯದ ವಿವಿಧ ಇಗರ್ಜಿಗಳ ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರು, ಕ್ರೈಸ್ತ ಬಾಂಧವರು ಮತ್ತಿತರರು ಉಪಸ್ಥಿತರಿದ್ದರು. ಲವೀನ ಪ್ರೀತಿ ಕ್ರಾಸ್ತ ಇಗರ್ಜಿಯ ಸಂಕ್ಷಿಪ್ತ ಚರಿತ್ರೆ ವಾಚಿಸಿದರು.
     ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ದಿವ್ಯ ಸಂದೇಶ ನೀಡಿ, ಸಾಂತಾ ಲಾರೆನ್ಸಾರ ಮೂಲಕ ಹಲವಾರು ಪವಾಡಗಳು ಇಲ್ಲಿ ನಡೆಯಲಿದೆ. ಇಲ್ಲಿನ ಧರ್ಮಪ್ರಜೆಗಳಿಗೆ, ಕ್ರೈಸ್ತ-ಅಕ್ರೈಸ್ತ ಬಾಂಧವರಿಗೆ ಒಳಿತಾಗಲಿ ಎಂದು ಆಶಿಸಿದರು. ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೂತನ ಇಗರ್ಜಿಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೊರತಂದ `ಪೆರ್ಮುದೆಚೊ ಪರ್ಜಳ್' ಸ್ಮರಣ ಸಂಚಿಕೆಯನ್ನು ಧರ್ಮಾಧ್ಯಕ್ಷರು ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರುಗಳಾದ ಫಾ. ಜೋನ್ ವಾಸ್ ಅವರಿಗೆ ನೀಡುವುದರ ಮೂಲಕ ಬಿಡುಗಡೆಗೊಳಿಸಿದರು. ಸ್ಮರಣ ಸಂಚಿಕೆಗೆ ಹೆಸರು ನೀಡಿದ ತಿಮೊಥಿ ಡಿಸೋಜ ಚನ್ನಿಕೋಡಿ ಅವರಿಗೆ ಬಹುಮಾನ ವಿತರಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾ, ಡೊಮಿನಿಕನ್ ಪ್ರೊವಿನ್ಶಿಯಲ್ ಫಾ. ನವೀನ್ ಸಲ್ಡಾನ್ಹಾ, ನೂತನ ಇಗರ್ಜಿಯ ಕಟ್ಟಡದ ಯೋಜನೆಗೆ ಚಾಲನೆ ನೀಡಿದ ಕಯ್ಯಾರು ಇಗರ್ಜಿಯ ಧರ್ಮಗುರು ಫಾ. ವಿಕ್ಟರ್ ಡಿಸೋಜ, ನೂತನ ಇಗರ್ಜಿ ಕಟ್ಟಡದ ಅಭಿಯಂತರ ಪಾವ್ಲ್‍ಸನ್ ಕೊರೆಯ ಎರ್ನಾಕುಳಂ, ಇಗರ್ಜಿಯ ವಿವಿಧ ಕಾರ್ಯಚಟುವಟಿಕೆಗಳಿಗೆ ನೆರವಾದ ನವೀನ್ ರಂಜಿತ್ ಡಿಸೋಜ ಅವರನ್ನು ಸನ್ಮಾನಿಸಲಾಗುವುದು. ಇಗರ್ಜಿಯ ಕ್ರೈಸ್ತಬಾಂಧವರ ಪರವಾಗಿ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಅವರನ್ನು ಶಾಲುಹೊದಿಸಿ ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಕಾಸರಗೋಡು ವಲಯದ ಧರ್ಮಗುರು ಫಾ. ಜೋನ್ ವಾಸ್ ಮಾತನಾಡಿ, ದಿನನಿತ್ಯ ಸೇವಿಸುವ ಅನ್ನದಲ್ಲಿ ಒಂದು ಹಿಡಿಯನ್ನು ತೆಗೆದಿಟ್ಟು ಧರ್ಮಕೇಂದ್ರದ ಕಟ್ಟಡಕ್ಕಾಗಿ ಉಪಯೋಗಿಸುವಂತಹ ಅನೇಕರ ಸಹಾಯಹಸ್ತದ ಫಲವಾಗಿ ಇಂದು ನೂತನ ದೇವಾಲಯದ ಉದ್ಘಾಟನೆ ಸಾಧ್ಯವಾಗಿದೆ. ದೇವಾಲಯ ನಿರ್ಮಾಣಗೊಂಡರೆ ಸಾಲದು ಪೂಜೆ-ಪುನಸ್ಕಾರಗಳು ನಿತ್ಯ ನಡೆಯಬೇಕು. ಇದು ಇಲ್ಲಿ ಖಂಡಿತಾ ನಡೆಯಲಿದೆ. ಎಲ್ಲರೂ ಧನ್ಯತಾ ಭಾವದಿಂದ ಜೀವಿಸಲು ಪಾಲನಾ ಸಂತರಾದ ಸಾಂತಾ ಲಾರೆನ್ಸಾರ ಮೂಲಕ ದೇವರು ಅನುಗ್ರಹಿಸಲಿ ಎಂದು ಆಶಿಸಿದರು.
    ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ. ವಿಕ್ಟರ್ ಡಿಸೋಜ ಮಾತನಾಡಿ, ಮಾನವರು ಕೇವಲ ದೇವರ ಉಪಕರಣಗಳು. ಮದರ್ ಥೆರೆಸಾ ಹೇಳಿದಂತೆ ನಾವೆಲ್ಲರೂ ಪೆನ್ಸಿಲ್‍ನಂತೆ. ಅದನ್ನು ಬರೆಸುವವರು ದೇವರು ಎಂದರು. ಸರ್ವಜನಾಂಗದ ವಿಶ್ವಾಸ ಜೀವಾಳವಾಗಲಿ. ನಮ್ಮ ನಂಬಿಕೆ ಬೆಳೇಯಲಿ. ಮೂರನೇ ಶತಮಾನದಲ್ಲಿ ಜೀವಿಸಿದ್ದ ಸಾಂತಾಲಾರೆನ್ಸರು ಬಡವರ ಮೇಲೆ ಅಪಾರ ಕಾಳಜಿ ಇದ್ದವರು. ಅವರು ನಮ್ಮೆಲ್ಲರ ಮೇಲೆ ಆಶೀರ್ವಾದಗಳನ್ನು ಸುರಿಸಲಿ ಎಂದರು.
    ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣ ಜೆ., ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಮಾತನಾಡಿದರು. ಇಗರ್ಜಿಯ ಪಾಲನಾ ಸಮಿತಿ ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು ವರದಿ ಮಂಡಿಸಿದರು. ಕಯ್ಯಾರು ವಿಜಯ ಜೇಸುರಾಜ ಕಾನ್ವೆಂಟಿನ ಸುಪೀರಿಯರ್ ಸಿ. ಮೊಂತಿನ್ ಗೋಮ್ಸ್, ಪುತ್ತಿಗೆ ಪಂಚಾಯಿತಿ ಸದಸ್ಯೆ ಶಾಂತಿ ಡಿಸೋಜ, ಪೈವಳಿಕೆ ಪಂಚಾಯಿತಿ ಸದಸ್ಯರಾದ ಎಂ. ಕೆ. ಅಮೀರ್ ಪೆರ್ಮುದೆ, ಹರೀಶ್ ಬೊಟ್ಟಾರಿ, ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿಸೋಜ, ಕಾರ್ಯದರ್ಶಿ ರೋಶನ್ ಡಿಸೋಜ ಉಪಸ್ಥಿತರಿದ್ದರು. ಪೆರ್ಮುದೆ ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿಸೋಜ ಪುರುಷಮಜಲು ವಂದಿಸಿದರು. ಇಗರ್ಜಿಯ ನೂತನ ಕಟ್ಟಡದ ಗುತ್ತಿಗೆದಾರರು, ವಸ್ತು ರೂಪದಲ್ಲಿ ಹಾಗೂ ಧನ ರೂಪದಲ್ಲಿ ಸಹಾಯ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
    ಸಾಂಸ್ಕøತಿಕ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ. ವಿಕ್ಟರ್ ಡಿಸೋಜ, ಪೈವಳಿಕೆ ಪಂಚಾಯಿತಿ ಉಪಾಧ್ಯಕ್ಷೆ ಸುನಿತ ವಲ್ಟಿ ಡಿಸೋಜ, ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿಸೋಜ ಪುರುಷಮಜಲು, ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು ಉಪಸ್ಥಿತರಿದ್ದರು. ಇಗರ್ಜಿಯ ಹಾಗೂ ಪರಿಸರದ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಿತು. ಬಳಿಕ ಜೆ. ಪಿ. ತೂಮಿನಾಡು ರಚಿಸಿ, ಕುಶಲ್ದರಸೆ ನವೀನ್ ಡಿ ಪಡೀಲ್ ನಿರ್ದೇಶಿಸಿದ, ಕೃಷ್ಣ ಜಿ. ಮಂಜೇಶ್ವರ ನಿರ್ಮಿಸಿದ ಮಂಜೇಶ್ವರ ಶಾರದಾ ಆಟ್ರ್ಸ್ ಕಲಾವಿದರು ಅಭಿನಯಿಸಿದ `ಬಂಜಿಗ್ ಹಾಕೊಡ್ಚಿ' ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries