ಪೆರ್ಲ: ಕೇರಳ ಸರಕಾರದ ಸಾಂಸ್ಕೃತಿಕ ಇಲಾಖೆಯ ವಜ್ರ ಜುಬಿಲಿ ಫೆಲೋಶಿಪ್ ಯೋಜನೆಯ ಅಂಗವಾಗಿ ಎಣ್ಮಕಜೆ ಮತ್ತು ಪುತ್ತಿಗೆ ಗ್ರಾಮ ಪಂಚಾಯತಿಯ ಕಲಾಸಕ್ತರಿಗೆ ಎಣ್ಮಕಜೆ ಪಂಚಾಯತಿ ಸಭಾಂಗಣದಲ್ಲಿ ಉಚಿತ ಕಲಾ ತರಬೇತಿಯನ್ನು ಆಯೋಜಿಸಲಾಗಿದೆ. ಕನ್ನಡ, ತುಳು,ಮಲಯಾಳಂ ಭಾಷೆಗಳನ್ನು ಹಿರಿಯ ಖ್ಯಾತ ಕಲಾವಿದರು ತರಬೇತಿ ನೀಡಲಿದ್ದಾರೆ. ನಾಡಿನ ಸಾಂಸ್ಕೃತಿಕ ಸಂಪನ್ನತೆಯನ್ನು ಪುಷ್ಟಿಗೊಳಿಸುವುದಕ್ಕಾಗಿ ಈ ಯೋಜನೆಯಲ್ಲಿ ನಮ್ಮ ಮಕ್ಕಳನ್ನು ಸೇರಿಸುವುದು ಅಗತ್ಯವಾಗಿದೆ. ಹತ್ತು ವರ್ಷ ಪ್ರಾಯಕ್ಕೆ ಮೇಲ್ಪಟ್ಟ, ಎಣ್ಮಕಜೆ ಹಾಗೂ ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಿಕರು ಹೆಸರು ನೋಂದಾಯಿಸಿ ತರಬೇತಿ ಪಡೆಯಬಹುದಾಗಿದೆ. ಸಂಪೂರ್ಣ ಉಚಿತವಾಗಿರುವ ತರಬೇತಿಯಲ್ಲಿ ಚಿತ್ರಕಲೆ(ಪ್ರತಿ ಶನಿವಾರ ಮತ್ತು ಭಾನುವಾರ), ತಿರುವಾದಿರ ನೃತ್ಯ(ಶನಿವಾರ), ಪೂರಂಕಳಿ(ಭಾನುವಾರ) ವಿಷಯಗಳಲ್ಲಿ ತರಬೇತಿ ನಡೆಯಲಿದೆ. ಆಸಕ್ತರು ಅರ್ಜಿ ಪ್ರತಿಗಳನ್ನು ಆಯಾ ಗ್ರಾ.ಪಂ. ಕಾರ್ಯಾಲಯಗಳಿಂದ ಪಡೆದು ಸಲ್ಲಿಸಬಹುದಾಗಿದ್ದು, ಅವಕಾಶವನ್ನು ಸದುಪಯೋಗ ಪಡಿಸಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ ಪಂಚಾಯತಿನ ಅಧಿಕಾರಿಯರನ್ನು ಸಂಪರ್ಕಿಸಬಹುದು ಅಥವಾ 9946164948 ಸಂಖ್ಯೆ ಸಂಪರ್ಕಿಸಲು ತಿಳಿಸಲಾಗಿದೆ.
ಪುತ್ತಿಗೆ-ಎಣ್ಮಕಜೆಗಳಲ್ಲಿ ಉಚಿತ ಕಲಾ ಸಾಂಸ್ಕøತಿಗೆ ತರಬೇತಿಗೆ ಅವಕಾಶ
0
ಮೇ 02, 2019