HEALTH TIPS

ವಾಹನ ದಾಖಲೆಗಳು ಡಿಜಿಟಲ್- ವಾಹನ ನೋಂದಾವಣೆ `ಸಾರಥಿ ಯೋಜನೆ' ಅನುಷ್ಠಾನ

   
        ಕಾಸರಗೋಡು: ಕೇರಳದ ಜನರು ಇನ್ನು  ಮುಂದೆ ವಾಹನ ನೋಂದಾವಣೆಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಎಲ್ಲ  ವಾಹನಗಳ ಕುರಿತಾದ ಸಂಪೂರ್ಣ ಮಾಹಿತಿಗಳನ್ನು  ಒಂದೇ ಸೂರಿನಡಿಗೆ ತಲುಪಿಸುವುದರ ಅಂಗವಾಗಿ ನೂತನ ಯೋಜನೆಯನ್ನು  ಜಾರಿಗೆ ತರಲು ನಿರ್ಧರಿಸಲಾಗಿದೆ.
      ವಾಹನ ನೋಂದಣಿ ಸೇವೆಗಳು (ವಾಹನ್) ಮತ್ತು  ಚಾಲನಾ ಪರವಾನಗಿ ವ್ಯವಹಾರಗಳನ್ನು  ಏಕೀಕರಿಸಿ ರಾಷ್ಟ್ರದಾದ್ಯಂತ ಕೇಂದ್ರ ಸರಕಾರವು `ಸಾರಥಿ ಯೋಜನೆ'ಯನ್ನು  ಕಾರ್ಯಗತಗೊಳಿಸಿದೆ. ವಾಹನ್ ಸಾರಥಿ ಯೋಜನೆಯು ಪೂರ್ಣರೂಪದಲ್ಲಿ  ಅನುಷ್ಠಾನಕ್ಕೆ ಬರುವುದರೊಂದಿಗೆ ಏಜೆಂಟ್‍ಗಳ ಸಹಾಯವಿಲ್ಲದೆ ಅರ್ಜಿಗಳನ್ನು  ಸಲ್ಲಿಸಬಹುದಾಗಿದೆ.
         ಅರ್ಜಿಯ ಸ್ಥಿತಿಯನ್ನು  ಸಮಯೋಚಿತವಾಗಿ ತಿಳಿಯಲೂ ಅವಕಾಶವಿದೆ. ವಾಹನ್ ಸಾರಥಿ ಯೋಜನೆಯು ಜಾರಿಗೆ ಬಂದರೆ ಪರ್ಮಿಟ್‍ಗಳು ಇತ್ಯಾದಿಗಳಿಗಾಗಿ ಜನರು ಆರ್‍ಟಿಒ ಕಚೇರಿಗೆ ತೆರಳಬೇಕಾಗಿಲ್ಲ. ಇವುಗಳನ್ನೆಲ್ಲ  ಸ್ವಂತ ಕಂಪ್ಯೂಟರ್‍ನಿಂದಲೇ ಡೌನ್‍ಲೋಡ್ ಮಾಡಲು ಸಾಧ್ಯವಿದೆ.
ನಿರ್ದಿಷ್ಟ  ಸಮಯದೊಳಗೆ ವಹಿಸಿಕೊಡಲಾದ ಕೆಲಸವನ್ನು  ಮಾಡಲು ಅ„ಕಾರಿಗಳು ಹೊಣೆಗಾರರಾಗಿರುವರು. ವಾಹನಕ್ಕೆ ಸಂಬಂ„ಸಿದ ದಾಖಲೆಗಳನ್ನು  ಡಿಜಿಟಲ್ ಆಗಿ ಸಂರಕ್ಷಿಸಿಡಲು ಸಾಧ್ಯವಾಗುವ ಡಿಜಿಟಲ್ ಲಾಕರ್ ವ್ಯವಸ್ಥೆಯ ಪ್ರಯೋಜನವೂ ಸಂಪೂರ್ಣವಾಗಿ ದೊರಕಲಿದೆ. ಈ ಯೋಜನೆಯನ್ನು  ರಾಜ್ಯದ 14 ಜಿಲ್ಲೆಗಳಲ್ಲೂ  ಕಾರ್ಯಗತಗೊಳಿಸಲು ನಿರ್ಧರಿಸಲಾಗಿದ್ದು, ವಾಹನ ಮಾರಾಟ ಮಾಡುವಾಗ ಮಾಲಕರ ಹಕ್ಕನ್ನು  ಬದಲಾಯಿಸುವುದರ ಜವಾಬ್ದಾರಿ ಕೂಡ ಇನ್ನು  ಮುಂದೆ ಮಾರಾಟ ಮಾಡುವ ವ್ಯಕ್ತಿಯದ್ದಾಗಿರಲಿದೆ.
      ಈ ಹಿಂದೆ ವಾಹನಗಳ ನೋಂದಣಿ ಹಾಗೂ ಲೈಸನ್ಸ್‍ಗಾಗಿರುವ ಸ್ಮಾರ್ಟ್ ಮೂವ್ ಎಂಬ ಸಾಫ್ಟ್‍ವೇರ್‍ನ ಬದಲಿಗೆ ವಾಹನ್ ಸಾರಥಿಗೆ ಮೋಟಾರು ವಾಹನ ಇಲಾಖೆಯು ಮಾರ್ಪಾಡುಗೊಳ್ಳುತ್ತಿದೆ. ಇದರ ಮೂಲಕ ಪ್ರಧಾನವಾಗಿ ಆರು ಬದಲಾವಣೆಗಳೊಂದಿಗೆ ಡ್ರೈವಿಂಗ್ ಲೈಸನ್ಸ್  ಪ್ರಸ್ತುತಪಡಿಸಲಾಗುವುದು.
    ಕ್ಯೂಆರ್ ಕೋಡ್, ಸರಕಾರಿ ಹಾಲೋಗ್ರಾಂ, ಮೈಕ್ರೋಲೈನ್, ಮೈಕ್ರೋಟೆಕ್ಸ್ಟ್ , ಯುವಿ ಎಂಬ್ಲಂ,  ಗೈಲ್ಲೋಚ್‍ಪ್ಯಾಟರ್ನ್ ಹೀಗೆ ಆರು ಸುರಕ್ಷಾ ವ್ಯವಸ್ಥೆಗಳು ನೂತನ ಕಾರ್ಡ್‍ನಲ್ಲಿ ಇರಲಿವೆ. ಇದಲ್ಲದೆ ವ್ಯಕ್ತಿಯ ಕುರಿತಾದ ಮೂಲಭೂತ ಮಾಹಿತಿಗಳನ್ನು  ದಾಖಲಿಸಲು ಕೂಡ ನಿರ್ಧರಿಸಲಾಗಿದೆ.
ರಾಜ್ಯ ಸರಕಾರದ ಸೀಲ್, ಹಾಲೋಗ್ರಾಂ, ವ್ಯಕ್ತಿಯ ಭಾವಚಿತ್ರ, ರಕ್ತಗುಂಪು ಮೊದಲಾದವುಗಳನ್ನು  ಮುಂಭಾಗದಲ್ಲಿ  ಕಾಣುವ ರೀತಿಯಲ್ಲಿ  ನೂತನ ಕಾರ್ಡ್‍ನ ವಿನ್ಯಾಸ ಮಾಡಲಾಗಿದೆ. ಹಿಂಭಾಗದಲ್ಲಿ  ಕ್ಯೂಆರ್ ಕೋಡ್ ಇದೆ. ಇದನ್ನು  ಸ್ಕ್ಯಾನ್ ಮಾಡಿದರೆ ಲೈಸನ್ಸ್  ಮಾಲಕರ ಕುರಿತಾದ ಎಲ್ಲ  ಮಾಹಿತಿಗಳು ದೊರಕಲಿವೆ. ಮಾತ್ರವಲ್ಲದೆ ಲೈಸನ್ಸ್  ನಂಬರ್, ಮೋಟಾರು ವಾಹನ ಇಲಾಖೆಯ ಸೀಲ್ ಇತ್ಯಾದಿಗಳನ್ನು  ಕಾರ್ಡ್‍ನ ಎರಡೂ ಬದಿಗಳಲ್ಲಿ  ನೋಡಬಹುದಾಗಿದೆ. ಹಳದಿ, ಹಸಿರು, ನೇರಳೆ ಬಣ್ಣಗಳನ್ನು  ಸೇರಿಸಿ ಕಾರ್ಡ್‍ನ ವಿನ್ಯಾಸ ಮಾಡಲಾಗಿದೆ.
     ಕೇಂದ್ರೀಕೃತ ಸಾಫ್ಟ್‍ವೇರ್ ವ್ಯವಸ್ಥೆ  : ವಾಹನ್ ಸಾರಥಿ ಸಾಫ್ಟ್‍ವೇರ್‍ಗೆ ಮಾರ್ಪಾಡುಗೊಳ್ಳುವಾಗ ಹಲವಾರು ಕ್ಲರಿಕಲ್, ಆಫೀಸ್ ಸೂಪರ್‍ವೈಸರ್ ಹಂತದಲ್ಲಿರುವ ಅಧಿಕಾರಿಗಳಿಗೆ ಕೆಲಸವಿಲ್ಲದಂತಾಗಲಿದೆ. ಇವರನ್ನು  ಬೇರೆ ವಲಯಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ ಇಲಾಖೆಯ ಕಾರ್ಯಧಕ್ಷತೆಯನ್ನು  ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಮೋಟಾರು ವಾಹನ ಇಲಾಖೆಯು ಇನ್ನು  ಮುಂದೆ ಕೇಂದ್ರೀಕಜತ ಸಾಫ್ಟ್‍ವೇರ್ ಆದ ವಾಹನ್ ಸಾರಥಿಗೆ ಮಾರ್ಪಾಡುಗೊಳ್ಳುತ್ತಿದೆ. ಮೇ 1ರಿಂದ ಈ ಯೋಜನೆಯನ್ನು  ಕೇರಳದಲ್ಲಿ  ಜಾರಿಗೆ ತರಲಾಗಿದೆ. ಇನ್ನು  ಮುಂದೆ ಎಲ್ಲ ಲೈಸನ್ಸ್  ಈ ಸಾಫ್ಟ್‍ವೇರ್ ಮೂಲಕ ಲಭಿಸಲಿದೆ. ಇದರಿಂದ ಕೇರಳದಲ್ಲಿ  ಸಂಪೂರ್ಣವಾಗಿ ಸಾರಥಿ ಮಾದರಿಯ ಡ್ರೈವಿಂಗ್ ಲೈಸನ್ಸ್‍ಗಳು ದೊರಕಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries