ಮಂಜೇಶ್ವರ: 1919 ರಲ್ಲಿ ಸ್ಥಾಪನೆಗೊಂಡ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ 124 ಧರ್ಮ ಕೇಂದ್ರಗಳ ಪೈಕಿಯಲ್ಲೊಂದಾಗಿರುವ ಮಂಜೇಶ್ವರ ಮರ್ಸಿ ಅಮ್ಮನವರ ದೇವಾಲಯದಲ್ಲಿ 2018 ಮೇ 22 ರಂದು ಅಂದಿನ ಬಿಷಪ್ ಅತಿ ವಂದನೀಯ ಗುರು ಡಾಕ್ಟರ್ ಅಲೋಶಿಯಸ್ ಪಾವ್ಲ್ ಡಿ ಸೋಜ ಅವರಿಂದ ಉದ್ಘಾಟನೆಗೊಂಡ ಶತಮಾನೋತ್ಸವದ ಸಮಾರೋಪ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು
ಮಂಗಳೂರು ಬಿಷಪ್ ವಂದನಿಯ ಡಾ. ಪೀಟರ್ ಪೌಲ್ ಸಾಲ್ಡಾನ ರವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಮೇ ಬಲಿ ಪೂಜೆ ನಡೆಯಿತು. ಬಳಿಕ 54 ಮಕ್ಕಳಿಗೆ ಐದು ವರ್ಷಗಳಿಗೊಮ್ಮೆ ನಡೆಸುವ ಆಶೀರ್ವಾದವನ್ನು ನೀಡಿ ಮಕ್ಕಳನ್ನು ಅನುಗ್ರಹಿಸಿ ಪ್ರಾರ್ಥನೆ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮರ್ಸಿ ಅಮ್ಮನವರ ಚರ್ಚ್ ನೂರನೇ ವರ್ಷವನ್ನು ಪೂರೈಸಿದೆ. ಈ ಮಧ್ಯೆ ಇದರ ಉನ್ನತಿಗೋಸ್ಕರ ಶ್ರಮಿಸಿದ ಪ್ರತಿಯೊಬ್ಬರನ್ನು ಕೂಡಾ ನಾನು ಅಭಿನಂದಿಸುತಿದ್ದೇನೆ. ಇದೀಗ ವೆಲೇರಿಯನ್ ಲೂಯಿಸ್ ರವರ ಮುಂದಾಳತ್ವದಲ್ಲಿ ಹೊಸ ಚರ್ಚ್ ಕೂಡಾ ಲೋಕಾರ್ಪಣೆ ಗೊಂಡಿದೆ.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ಚರ್ಚ್ ಕಾರ್ಯದರ್ಶಿ ರಿಝಿ ಡಿ ಸೋಜ ವರದಿ ವಾಚನಗೈದರು. ಬಳಿಕ ಭಿನ್ನ ಚೇತನರಾದ ಏಳು ಮಂದಿಗೆ ಪ್ರತಿ ತಿಂಗಳಿನಲ್ಲೂ 1000 ರೂ. ನಂತೆ ಜೀವನ ಪರ್ಯಂತ ಸಹಾಯ ಧನಕ್ಕೆ ವಂದನೀಯ ಗುರು ಜೋನ್ ವಾಸ್ ರವರು ಚಾಲನೆ ನೀಡಿದರು. ಬಳಿಕ ಮರ್ಸಿ ಅಮ್ಮನವರ ಚರ್ಚ್ ನಲ್ಲಿ ಸೇವೆಯನ್ನು ನೀಡಿದ ಐದು ಮಂದಿ ಧರ್ಮಗುರುಗಳಿಗೆ ವೇದಿಕೆಯಲ್ಲಿ ಸನ್ಮಾನಿಸಲಾುತು.
ಬಳಿಕ ಗುಲ್ಬರ್ಗ ಬಿಷಪ್ ವಂದನೀಯ ಡಾ. ರೋಬರ್ಟ್ ಮಿರಾಂಡ ರವರು ``ಝೈತ್" ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು.
ಬಳಿಕ ಮಂಗಳೂರು ಶಾಸಕ ಜೆ ಆರ್ ಲೋಬೋರವರು ಚರ್ಚ್ ನ ಅಧೀನದಲ್ಲಿರುವ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆಯನ್ನು ಸಲ್ಲಿಸಿದ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಬಳಿಕ ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರು ಚರ್ಚ್ ಪಾಲನಾ ಸಮಿತಿಯಲ್ಲಿ ದೀರ್ಘ ಕಾಲ ಸೇವೆಯನ್ನು ಸಲ್ಲಿಸಿದವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಚರ್ಚ್ ಗಾಗಿ ಸೇವೆಯನ್ನು ಸಲ್ಲಿಸಿದ ಉಪಾಧ್ಯಕ್ಷರುಗಳನ್ನು ಸನ್ಮಾನಿಸಿದರು. ಬಳಿಕ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ಸಮುದಾಯದ ಬಡ ಕುಟುಂಬದವರ ಮನೆ ದುರಸ್ಥಿಗಾಗಿ ನೀಡುವ ನಿಧಿಯನ್ನು ಫಲಾನುಭವಿಗಳಿಗೆ ನೀಡಿದರು. ಸಮುದಾಯದ ನಿರ್ಗತಿಕ ಕುಟುಂಬಗಳಿಗಾಗಿ ಐದು ಲಕ್ಷ ರೂ. ನ ಅರೋಗ್ಯ ನಿಧಿಯನ್ನು ವಾರ್ಡ್ ಸದಸ್ಯ ಅಬ್ದುಲ್ ರಹ್ಮಾನ್ ಹಾಜಿಯವರು ಉದ್ಘಾಟಿಸಿದರು.
ಚರ್ಚ್ ನ ಅಭಿವೃದ್ದಿಯ ರೂವಾರಿಗಳಾದ ಜೀನ್ ಲವಿನಾ ಮೊಂತೇರೋ, ನವೀನ್ ಮೊಂತೇರೋ ಸಹಿತ ಇತರರನ್ನು ಬಿರುದು ನೀಡಿ ಗೌರವಿಸಲಾಯಿತು. ಸಮುದಾಯದ ಬಡ ಕುಟುಂಬಗಳಿಗಾಗಿರುವ ಶಿಕ್ಷಣ ನಿಧಿಯನ್ನು ಸದ್ರಿ ಚರ್ಚ್ ನ ವಂದನೀಯ ಗುರು ವೆಲೇರಿಯನ್ನು ಲೂಯಿಸ್ ರವರು ಉದ್ಘಾಟಿಸಿದರು. ಸೇರಿದವರಿಗೆಲ್ಲರಿಗೂ ಅನ್ನ ಸಂತರ್ಪಣೆ ನಡೆಯಿತು. ಸೌದಿ ಫ್ರೆಂಡ್ಸ್ ರವರ ವತಿಯಿಂದ ರಸ ಮಂಜರಿ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.