ಬದಿಯಡ್ಕ: ರಂಗಸಿರಿ ಸಾಂಸ್ಕøತಿಕ ವೇದಿಕೆಯು ಒಂಭತ್ತು ವರ್ಷಗಳು ಪೂರೈಸಿ, ದಶಮದ ಸಂಭ್ರಮಕ್ಕೆ ಅಣಿಯಾಗುವ ಸಂತಸದಲ್ಲಿ ರಂಗಸಿರಿ ಸಂಭ್ರಮ 2019 ಎಂಬ ವಿಶೇಷ ಕಾರ್ಯಕ್ರಮವು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಕಾಸರಗೋಡಿನ ಹಲವು ಸಾಧಕ ಪ್ರತಿಭೆಗಳನ್ನು ಗೌರವಿಸಲಾಯಿತು. ಡ್ರಾಮಾ ಜ್ಯೂನಿಯರ್ ಖ್ಯಾತಿಯ ಅನೂಪ್ ರಮಣ ಶರ್ಮ, ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಹಾಗೂ ಕರ್ನಾಟಕ ರಾಜ್ಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಶ್ರೀಕೃಷ್ಣ ಶರ್ಮಾ ಅವರನ್ನು ರಂಗಸಿರಿಯ ವತಿಯಿಂದ ಗೌರವಿಸಲಾಯಿತು. ಜೊತೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಂಗಸಿರಿಯ ವಿದ್ಯಾರ್ಥಿಗಳಾದ ವಿದ್ಯಾ ಕುಂಟಿಕಾನಮಠ, ಸುಪ್ರೀತಾ ಸುಧೀರ್, ಅಭಿಜ್ಞಾ ಭಟ್, ಕಿಶನ್ ಅಗ್ಗಿತ್ತಾಯ, ಉಪಾಸನಾ ಪಂಜರಿಕೆ, ಆಕಾಶ್, ವಿಧೇಯ, ವಿಶ್ವಾಸ್, ಸೃಜನ್ ಕೇಶವ, ಅನ್ವಿತಾ ತಲ್ಪನಾಜೆ, ಸುಮೇಧಾ, ಸೂರಜ್ ಅವರನ್ನು ಅಭಿನಂದಿಸಲಾಯಿತು. ಗಣ್ಯರಾದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ನ್ಯಾಯವಾದಿ. ದಾಮೋದರ ಶೆಟ್ಟಿ, ಹಿರಿಯ ಸಂಗೀತ ಶಿಕ್ಷಕಿ ಸಾವಿತ್ರಿ ಕೆ. ಭಟ್ ದೊಡ್ಡಮಾಣಿ, ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಮೊದಲಾದವರು ಸಾಧಕ ಪ್ರತಿಭೆಗಳನ್ನು ಗೌರವಿಸಿದರು.
ರಂಗಸಿರಿ ಸಂಭ್ರಮ- ಕಾಸರಗೋಡಿನ ಪ್ರತಿಭೆಗಳಿಗೆ ಅಭಿನಂದನೆ
0
ಮೇ 24, 2019