ಉಪ್ಪಳ: ಬಾಯಾರು ಹಿರಣ್ಯದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಂಗಳವಾರದಿಂದ ಆರಂಭಗೊಂಡಿದ್ದು, ಮೇ. 17ರ ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಕಾರ್ಯಕ್ರಮದ ಅಂಗವಾಗಿ ಬುಧವಾರ ಪ್ರಾತ:ಕಾಲ 6 ಗಂಟೆಗೆ ಪುಣ್ಯಾಹವಾರ್ಚನೆ, ಗಣಪತಿ ಹೋಮ , ಪ್ರಾಯಶ್ಚಿತ ಹವನಗಳು, ಸುವಾಸಿನಿ ಪೂಜೆ, ಕನ್ನಿಕಾ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ 6 ಕ್ಕೆ ದೀಪಾರಾಧನೆ, ತ್ರಿಕಾಲಪೂಜೆ, ಜಲಶುದ್ಧಾದಿ ಕ್ರಿಯೆಗಳು, ಮಂಟಪ ಸಂಸ್ಕಾರ ಹಾಗೂ ಮಹಾಪೂಜೆಗಳು ನೆರವೇರಿದವು.
ಇಂದಿನ ಕಾರ್ಯಕ್ರಮ:
ಗುರುವಾರ ಪ್ರಾತ:ಕಾಲ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲಪೂಜೆ, ಅನುಜ್ಞಾಕಲಶ ಪೂಜೆ,ಅನುಜ್ಞಾ ಕಲಶಾಭಿಷೇಕ,ಕುಂಭೇಶ, ಕರ್ಕರೀ ಪೂಜೆ, ನಿದ್ರಾಕಲಶ ಪೂಜೆ, ಶಯ್ಯೋಪೂಜೆ, ವಿದೆಯೀಶ್ವರ ಕಲಶಪೂಜೆ, ತತ್ತ್ವ ಕಲಶ ಪೂಜೆ, ತತ್ವಹೋಮ, ಜೀವಕಲಶಪೂಜೆ, ಜೀವಕಲಶ ಶಯ್ಯೋಗಮನ, ಶಯ್ಯೆಯಲ್ಲಿ ಪೂಜೆ, ತ್ರಿಕಾಲ ಪೂಜೆ ಹಾಗೂ ಮಧ್ಯಾಹ್ನ 12.30 ಕ್ಕೆ ಪ್ರಸಾದಭೋಜನ ನಡೆಯಲಿದೆ. 6 ಗಂಟೆಗೆ ದೀಪಾರಾಧನೆ, ತ್ರಿಕಾಲಪೂಜೆ, ಬ್ರಹ್ಮಕಲಶಪೂಜೆ, ಪರಿಕಲಶ ಪೂಜೆ, ಅಧಿವಾಸ ಹೋಮ, ಮಂಡಲಪೂಜೆ, ಪೀಠಾಧಿವಾಸ ಕ್ರಿಯೆಗಳು, ಧ್ಯಾನಾಧಿವಾಸ, ಕಲಶಾಧಿವಾಸ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ 3.30 ರಿಂದ ಅರವಿಂದ ಆಚಾರ್ಯ ಮಾಣಿಲ ಇವರ ಸಾರಥ್ಯದಲ್ಲಿ ಭಜನಾ ಸಂಧ್ಯಾ, 5.30 ರಿಂದ ಮೂಕಾಂಬಿಕ ಮಕ್ಕಳ ಭಜನಾ ತಂಡ ಬೆರಿಪದವು ಇವರಿಂದ ಕುಣಿತ ಭಜನೆ, ರಾತ್ರಿ 7.00 ರಿಂದ ಹೆದ್ದಾರಿ ಎ ಯು ಪಿ ಶಾಲೆಯ ಮಕ್ಕಳಿಂದ ಭರತನಾಟ್ಯ ಹಾಗೂ ರಾತ್ರಿ 9. ರಿಂದ ಜಿ ಕೆ ನಾವಡ ಬಾಯಾರು ಅವರ ಸಾರಥ್ಯದಲ್ಲಿ ದೇವೀ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.