ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇಗುಲದಲ್ಲಿ ಅಕ್ಷಯ ತೃತೀಯ ಪರ್ವಕಾಲಕ್ಕೆ ವರ್ಷಾವಧಿ ಉತ್ಸವ ಹಾಗೂ ರಂಗಪೂಜಾ ಉತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿ ಜರಗಿದವು.
ಶ್ರೀ ದೇವರ ಸನ್ನಿಧಿಯಲ್ಲಿ ಉಷ: ಕಾಲ ಪೂಜೆಯೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಪರಮೇಶ್ವರ ಕಾರಂತರ ಅಮೃತ ಹಸ್ತದೊಂದಿಗೆ ಮೊಕ್ತೇಸರ ವೇ.ಮೂ.ಯನ್.ವಾಸುದೇವ ಭಟ್ ಇವರ ನೇತೃತ್ವದಲ್ಲಿ ಶ್ರೀ ಮಹಾ ಗಣಹೋಮ, ಪವಮಾನ ಅಭಿಷೇಕ, ನಾಗತಂಬಿಲ, ಗುರುವಂದನೆ, ವನಶಾಸ್ತಾರ ಸಹಿತ ಪರಿವಾರ ದೇವರಲ್ಲಿ ವಿಶೇಷ ಪೂಜಾದಿಗಳು ಪ್ರಾತ:ಕಾಲ, ಮಧ್ಯಾಹ್ನ, ಹಾಗೂ ರಾತ್ರಿ ಸಮಯಗಳಲ್ಲಿ ಸಲ್ಲಿಸಲಾಯಿತು. ಪ್ರಧಾನ ದೇವರಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಉತ್ಸವದ ಪ್ರಯುಕ್ತ ಕ್ಷೀರಾಭಿಷೇಕ, ದಧಿಯಾಭಿಷೇಕ ಘೃತಾಭಿಷೇಕ ಮಧುವಾಭಿಷೇಕ, ಸರ್ಕರಾಭಿಷೇಕ ಫಲಾಭಿಷೇಕಗಳೊಂದಿಗೆ ಪಂಚಾಮೃತಾಭಿಷೇಕವನ್ನು ಸಲ್ಲಿಸಿ ಶ್ರೀಗಂಧ, ಪುಷ್ಪ, ನಾಳಿಕೇರ ಜಲಧಾರೆಯೊಂದಿಗೆ ಏಕಾದಶಿ ರುದ್ರಾಭಿಷೇಕವನ್ನು ಮಾಡಿ ಸ್ಥಳ ಶುದ್ಧಿ ಪಂಚಗೌಮ್ಯ ಪುಣ್ಯಾಹ, ನವಕ ಪ್ರಧಾನಾಭಿಷೇಕ ಸಲ್ಲಿಸಿ, ರಜತ ಸ್ವರ್ಣಾಲಂಕಾರ, ಪುಷ್ಪಾಲಂಕರದೊಂದಿಗೆ ಮಹಾಪೂಜೆಯನ್ನು ಸಲ್ಲಿಸಲಾಯಿತು. ಭಕ್ತವೃಂದ ಹಾಗೂ ಸಮಿತಿಯವರಿಂದ ತ್ರಿಕಾಲದಲ್ಲಿ ಭಜನಾ ಸೇವೆ ಸಾಂಸ್ಕøತಿಕ ಸೇವೆಯನ್ನು ನೇರವೇರಿಸಿ ತೀರ್ಥ ಪ್ರಸಾಧವನ್ನು ಸ್ವೀಕರಿಸಿ ಅನ್ನದಾನವನ್ನು ವಿಶೇಷವಾಗಿ ಮಾಡಲಾಯಿತು. ರಾತ್ರಿ ಕಾಲದಲ್ಲಿ ಪರಿವಾರ ದೇವರಿಗೆ ವಿಶೇಷ ಸೇವೆಗಳನ್ನು ಸಲ್ಲಿಸಿ ಶ್ರೀ ಸದಾಶಿವ ದೇವರಿಗೆ ಶ್ರೀ ರಂಗ ಪೂಜಾದಿಗಳು ಸಾಂಪ್ರದಾಯಿಕ ಶ್ರದ್ದೆಯಿಂದ ನೆರವೇರಿತು.