ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿ ಆಯ್ಕೆಯಾದ ರಾಜ್ ಮೋಹನ್ ಉಣ್ಣಿತಾನ್ ರವರ ಜಾಥಾ ಗೊಂದಲ, ಘರ್ಷಣೆಯಲ್ಲಿ ಪರ್ಯವಸಾನಗೊಮಡ ಘಟನೆ ನಡೆದಿದೆ.
ಶನಿವಾರ ಸಂಜೆ ತಲಪಾಡಿಯಿಂದ ಕುಂಬಳೆ ತನಕ ವಿಜಯೋತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಆದರೆ ತೂಮಿನಾಡಿನಲ್ಲಿ ಜಮಾಯಿಸಿದ ಕಾರ್ಯಕರ್ತರು ಬಳಿಕ ತಲಪಾಡಿಗೆ ತೆರಳಿದಾಗ ಅಲ್ಲಿ ತಂಡವೊಂದು ಕಾರ್ಯಕರ್ತರಿಗೆ ಕಲ್ಲೆಸೆದಿರುವುದಾಗಿ ಹೇಳಲಾಗಿದೆ. ಇದರ ಮುಂದುವರಿದ ಭಾಗವಾಗಿ ತಲಪಾಡಿಯಲ್ಲಿ ಘರ್ಷಣೆ ಉಂಟಾಗಿದೆ. ಕೂಡಲೇ ಕರ್ನಾಟಕ ಪೊಲೀಸರು ಹಾಗೂ ಕೇರಳ ಪೊಲೀಸರು ಆಗಮಿಸಿ ಗಡಿಭಾಗದಲ್ಲಿ ಜಮಾಯಿಸಿದ್ದ ತಂಡವನ್ನು ಚದುರಿಸಿದ್ದಾರೆ.
ಬಳಿಕ ತೂಮಿನಾಡಿಗೆ ಧಿಢೀರ್ ಆಗಮಿಸಿದ ತಂಡವೊಂದು ಅಂಗಡಿಗೆ ಕಲ್ಲೆಸೆದು ಹಾನಿಗೊಳಿಸಿರುವುದಾಗಿ ದೂರಲಾಗಿದೆ. ಶರತ್ ಎಂಬವರ ಮಾಲಕತ್ವದಲ್ಲಿರುವ ಅಂಗಡಿಯ ಗಾಜು ಪುಡಿಯಾಗಿದೆ. ಹಾಗೂ ಕಲ್ಲೆಸೆತದಿಂದ ಒಬ್ಬ ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳಾದ ರಾಜೇಶ್ ಹಾಗೂ ಅಬ್ಬಕ್ಕ ಎಂಬ ವಯೋವೃದ್ದೆಯೋರ್ವೆ ಗಾಯಗೊಂಡಿದ್ದಾರೆ.