ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದ ನೂತನ ಧರ್ಮಗುರುಗಳಾಗಿ ಫಾದರ್. ಐವನ್ ಡಿ ಮೆಲ್ಲೊ ಅಧಿಕಾರ ಸ್ವೀಕರಿಸಿದರು.
ನೆಲ್ಲಿಕ್ಕಾರು ಸಂತ ವಿಕ್ಟರ್ ದೇವಾಲಯದಲ್ಲಿ ಸೇವೆ ಸಲ್ಲಿಸಿ ಕಯ್ಯಾರು ದೇವಾಲಯಕ್ಕೆ ವರ್ಗಾವಣೆಗೊಂಡ ಐವನ್ ಡಿ ಮೆಲ್ಲೊ ರವರನ್ನು ಬುಧವಾರ ಸಂಜೆ ಕಯ್ಯಾರು ಕ್ರಿಸ್ತರಾಜ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು.
ಪ್ರವೇಶದ್ವಾರದ ಬಳಿ ಹಾಲಿ ಧರ್ಮಗುರು ಹಾಗೂ ಸುಳ್ಯ ಚರ್ಚ್‍ಗೆ ವರ್ಗಾವಣೆಗೊಂಡಿರುವ ಫಾದರ್ ವಿಕ್ಟರ್ ಡಿ ಸೋಜ ಹೂಹಾರ ಹಾಕಿ ಸ್ವಾಗತಿಸಿದರು. ಬಳಿಕ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಅಧಿಕಾರ ಸ್ವೀಕಾರ ಮತ್ತು ಧಾರ್ಮಿಕ ವಿಧಿ ವಿಧಾನಕ್ಕೆ ಕಾಸರಗೋಡು ವಲಯ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್ ಜೋನ್‍ವಾಸ್ ಹಾಗೂ ಫಾದರ್ ವಿಕ್ಟರ್ ಡಿಸೋಜ ನೆರವೇರಿಸಿದರು.
ಮೂಡಬಿದ್ರೆ ವಲಯದ ಪ್ರಧಾನ ಧರ್ಮಗುರು ಫಾದರ್ ಪೌಲ್ ಸಿಕ್ವೇರಾ,ನೆಲ್ಲಿಕ್ಕಾರು ಸಂತ ವಿಕ್ಟರ್ ದೇವಾಲಯದ ನೂತನ ಧರ್ಮಗುರು ಫಾದರ್ ಮೆಲ್ವಿನ್ ಡಿ ಸೋಜ, ಪೆರ್ಮುದೆ ಸಂತ ಲೋರೆನ್ಸ್ ದೇವಾಲಯದ ಧರ್ಮಗುರು ಫಾದರ್ ಮೆಲ್ವಿನ್ ಫೆನಾರ್ಂಡಿಸ್, ವಿಜಯ ಜೇಸುರಾಜ್ ಕಾನ್ವೆಂಟಿನ ನೂತನ ಸುಪೀರಿಯರ್ ಸಿಸ್ಟರ್ ಜಾಸ್ಮಿನ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ನಡೆದ ಸರಳ ಸಮಾರಂಭದಲ್ಲಿ ನೂತನ ಧರ್ಮಗುರು ಫಾದರ್ ಐವನ್ ಡಿಮೆಲ್ಲೊ ರವರನ್ನು ಸನ್ಮಾನಿಸಲಾಯಿತು. ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ ಸೋಜ ಸ್ವಾಗತಿಸಿ,ಕಾರ್ಯದರ್ಶಿ ರೋಶನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.