ಕಾಸರಗೋಡು: ಚೆರುವತ್ತೂರು ಸರಕಾರಿ ತಾಂತ್ರಿಕ ಪ್ರೌಢಶಾಲೆಯಲ್ಲಿ 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಕೋರಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಮೇ 13 ರಿಂದ ಪ್ರವೇಶಾತಿ ನಡೆಯಲಿದೆ. 7ನೇ ತರಗತಿ ತೇರ್ಗಡೆಯಾಗಿರುವವರು ದಾಖಲೆ ಪತ್ರಗಳು, 20ರೂ.ನ ಛಾಪಪತ್ರ ಸಹಿತ ಹಾಜರುಪಡಿಸಬೇಕು. ಸಾರ್ವಜನಿಕ ಶಿಕ್ಷಣಾಲಯಗಳ 8,9,10ನೇ ತರಗತಿಗಳ ವಿಷಯಗಳಲ್ಲದೆ, ಜನರಲ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಡ್ರಾಯಿಂಗ್, ಟ್ರೇಡ್ ಥಿಯರಿ ಗಳಿಗೆ ಪ್ರತ್ಯೇಕ ತರಬೇತಿ ನೀಡಿ ಜ್ಯೂನಿಯರ್ ಇಂಜಿನಿಯರ್ ಗಳನ್ನು ಸಿದ್ಧಪಡಿಸುವುದು ತಾಂತ್ರಿಕ ಪ್ರೌಢಶಾಲೆಗಳ ಉದ್ದೇಶವಾಗಿದೆ. ಇಲ್ಲಿ ನೀಡಲಾಗುವ ಟಿ.ಎಚ್.ಎಸ್.ಎಸ್.ಎಲ್.ಸಿ. ಅರ್ಹತಾಪತ್ರ ಎಸ್.ಎಸ್.ಎಲ್.ಸಿಗೆ ಸಮಾನವಾಗಿದೆ. ಈ ಶಿಕ್ಷಣಾಲಯದಲ್ಲಿ ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಟನಿರ್ಂಗ್, ಫಿಟ್ಟಿಂಗ್ ಎಂಬ ಸ್ಪೆಷ್ಯಲೈಸ್ಡ್ ಟ್ರೇಡ್ ಗಳಲ್ಲಿ ಪರಿಣತ ತರಬೇತಿ ನೀಡಲಾಗುತ್ತದೆ.
ಟಿ.ಎಚ್.ಎಸ್.ಎಸ್.ಎಲ್.ಸಿ. ಕಲಿಕೆಯ ಜೊತೆಗೆ ಕೇಂದ್ರ ಸರಕಾರದ ನೌಕರಿ ನೈಪುಣ್ಯ ಯೋಜನೆಯಾಗಿರುವ ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಪ್ರೇಂವರ್ಕ್ (ಎನ್.ಎಸ್.ಕ್ಯೂ.ಎಫ್) ಮುಖಾಂತರ ಪ್ರತ್ಯೇಕ ತರಬೇತಿ ನೀಡಲಾಗುವುದು. ಕಲಾ-ಕ್ರೀಡಾ-ವಿಜ್ಞಾ ನ ಮೇಳಗಳಲ್ಲಿ ಶಾಲಾ ಮಟ್ಟದಲ್ಲಿ ಪ್ರತಿಭೆ ತೋರಿರುವವರಿಗೆ ನೇರವಾಗಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು, ಗ್ರೇಸ್ ಮಾರ್ಕ್ ಪಡೆಯಲೂ ಅವಕಾಶಗಳಿವೆ. ಕೇಂದ್ರ-ರಾಜ್ಯ ಸರಕಾರಗಳು ನೀಡುವ ಎಲ್ಲ ವಿದ್ಯಾರ್ಥಿವೇತನಗಳು, ಯೋಜನೆಗಳು ತಾಂತ್ರಿಕ ಪ್ರೌಢಶಾಲೆಗಳಲ್ಲೂ ಲಭ್ಯವಿದೆ.
ಮಕ್ಕಳಿಗೆ ವಸತಿ ಹೂಡಿ ಕಲಿಕೆ ನಡೆಸಲು ಹಾಸ್ಟೆಲ್ ಸೌಲಭ್ಯಗಳಿರುವ ಅಪೂರ್ವ ಸಂಸ್ಥೆಗಳಲ್ಲಿ ಚೆರುವತ್ತೂರಿನ ಈ ಸಂಸ್ಥೆಯೂ ಒಂದು. ತಾಂತ್ರಿಕ ಪ್ರೌಢಶಾಲೆ ಕಲಿಕೆಯಲ್ಲಿ ತೇರ್ಗಡೆಹೊಂದಿದದವರಲ್ಲಿ ನಿಗದಿತ ಮಕ್ಕಳಿಗೆ ಪಾಲಿಟೆಕ್ನಿಕ್ ಕಲಿಕೆಗೆ ಅವಕಾಶವಿದೆ. ಈ ಮೂಲಕ ಇಂಜಿನಿಯರಿಂಗ್ ಕಾಲೇಜು ಪ್ರವೇಶಾತಿಗೂ ಸಾಧ್ಯತೆಗಳಿವೆ. ಅರ್ಜಿದಾರರ ಸಹಾಯಕ್ಕೆ ಸಂಸ್ಥೆಯಲ್ಲಿ ಹೆಲ್ಪ್ ಡೆಸ್ಕ್ ಸಿದ್ಧಪಡಿಸಲಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 0467-2260210,940006497 ಸಂಪರ್ಕಿಸಬಹುದು.