ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ದ್ರವ್ಯಕಲಶೋತ್ಸವದ ಸಂದರ್ಭದಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಶಿಷ್ಯ ವೃಂದದವರಿಂದ ನೃತ್ಯ ಸಿಂಚನ ಹಾಗೂ ಕಾರ್ತಿಕೇಯ ಕಲ್ಯಾಣ ಎಂಬ ನೃತ್ಯ ರೂಪಕ ಪ್ರದರ್ಶನಗೊಂಡಿತು.
ನಟುವಾಂಗ ಹಾಗೂ ನಿರ್ದೇಶನದಲ್ಲಿ ವಿದುಷಿಃ ಅನುಪಮಾ ರಾಘವೇಂದ್ರ ನಿರ್ವಹಿಸಿದ್ದರು. ಹಾಡುಗಾರಿಕೆಯಲ್ಲಿ ವಸಂತ ಕುಮಾರ ಗೋಸಾಡ, ಮೃದಂಗ ಹಾಗೂ ರಿದಂ ಪ್ಯಾಡ್‍ನಲ್ಲಿ ರಾಜೀವ ಗೋಪಾಲ ವೆಳ್ಳಿಕ್ಕೋತ್, ವಯೊಲಿನ್‍ನಲ್ಲಿ ಬಾಲರಾಜ್ ಮುಳ್ಳೇರಿಯ ಹಾಗೂ ಕೀ ಬೋರ್ಡ್‍ನಲ್ಲಿ ಅಮ್ಮು ಮಾಸ್ತರ್ ಸಹಕರಿಸಿದರು.