ಕುಂಬಳೆ: ಐ.ಎಚ್.ಆರ್.ಡಿ. ವ್ಯಾಪ್ತಿಯ ಕುಂಬಳೆಯ ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ನಲ್ಲಿ ವಿವಿಧ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ನಡೆಯಲಿದೆ. ಮೇ 14ರಂದು ಬೆಳಿಗ್ಗೆ 10.30ಕ್ಕೆ ಕಂಪ್ಯೂಟರ್ ವಿಜ್ಞಾನ ವಿಭಾಗದ ಉಪನ್ಯಾಸಕ ಹುದ್ದೆಗೆ, ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಸಂದರ್ಶನ ನಡೆಯಲಿದೆ. ಅಂದು ಮಧ್ಯಾಹ್ನ 1.30ಕ್ಕೆ ಗಣಿತ, ಇಂಗ್ಲಿಷ್ ವಿಭಾಗದ ಉಪನ್ಯಾಸಕ, ಮೇ.15ರಂದು ಬೆಳಿಗ್ಗೆ 10.30ಕ್ಕೆ ಕನ್ನಡ, ಹಿಂದಿ,ಮಲೆಯಾಳಂ, ವಾಣಿಜ್ಯ ವಿಭಾಗಗಳ ಉಪನ್ಯಾಸಕ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಅಂದು ಮಧ್ಯಾಹ್ನ 1.30ಕ್ಕೆ ಕಂಪ್ಯೂಟರ್, ಇಲೆಕ್ಟ್ರಾನಿಕ್ಸ್ ಉಪನ್ಯಾಸಕರ ಸಂದರ್ಶನ ನಡೆಯಲಿದೆ.
ಕನ್ನಡ, ಗಣಿತ,ಇಂಗ್ಲಿಷ್, ಹಿಂದಿ, ಮಲೆಯಾಳಂ, ವಾಣಿಜ್ಯ ವಿಭಾಗಗಳಲ್ಲಿ ಶೇ 55 ಅಂಕ ಸಹಿತ ಸ್ನಾತಕೋತ್ತರ ಪದವಿ, ಇತರ ವಿಷಯಗಳಲ್ಲಿ ಶೇ 60ಅಂಕ ಸಹಿತ ಸ್ನಾತಕೋತ್ತರ ಪದವಿ ಈ ಹುದ್ದೆಗೆ ಶಿಕ್ಷಣಾರ್ಹತೆಯಾಗಿದೆ. ಆಸಕ್ತರು ದಾಖಲೆ ಪತ್ರಗಳು, ವೃತ್ತಿಅನುಭವ, ಜನನ ದಿನಾಂಕ ಪತ್ರ ಇತ್ಯಾದಿಗಳೊಂದಿಗೆ ನಿಗದಿತ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 04998-215615,8547005058 ಸಂಪರ್ಕಿಸಬಹುದೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.