ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮೇ 23 ರಿಂದ 28 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ದ್ರವ್ಯ ಕಲಶ ಮಹೋತ್ಸವ ಜರಗಲಿದೆ.
ಮೇ 23 ರಂದು ಬೆಳಗ್ಗೆ 9 ಕ್ಕೆ ಉಗ್ರಾಣ ತುಂಬಿಸುವ ಶೋಭಾಯಾತ್ರೆ, 10 ರಿಂದ ಉಗ್ರಾಣ ತುಂಬಿಸುವ ಮುಹೂರ್ತ, ಸಂಜೆ 5.30 ಕ್ಕೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿ ಅವರಿಗೆ ಪೂರ್ಣಕುಂಭ ಸ್ವಾಗತ, 6 ಕ್ಕೆ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ, 6.30 ರಿಂದ ಧಾರ್ಮಿಕ ಸಭೆ, ರಾತ್ರಿ 8 ರಿಂದ ಸಮೂಹ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ, ಅಂಕುರಾರೋಹಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, 24 ರಂದು ಬೆಳಗ್ಗೆ 5 ರಿಂದ ಅಭಿಷೇಕ, ಉಷ:ಪೂಜೆ, ಗಣಹೋಮ, ತ್ರಿಕಾಲ ಪೂಜೆ, ಅಂಕುರಪೂಜೆ, ಶಾಂತಿ ಹೋಮಗಳು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ರಾತ್ರಿ 7 ರಿಂದ ತ್ರಿಕಾಲ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆ, 25 ರಂದು ಬೆಳಗ್ಗೆ 5 ರಿಂದ ಅಭಿಷೇಕ, ಉಷ:ಪೂಜೆ, ಗಣಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ಶಾಂತಿ ಹೋಮ, ಸ್ವಶಾಂತಿ, ಶ್ವಾನಶಾಂತಿ, ಅದ್ಭುತ ಶಾಂತಿ, ಚೋರಶಾಂತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ತ್ರಿಕಾಲ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆ ನಡೆಯುವುದು.
ಮೇ 26 ರಂದು ಬೆಳಗ್ಗೆ 5 ರಿಂದ ಅಭಿಷೇಕ, ಉಷ:ಪೂಜೆ, ಗಣಹೋಮ, ತ್ರಿಕಾಲ ಪೂಜೆ, ಅಂಕುರಪೂಜೆ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ತ್ರಿಕಾಲ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆ ನಡೆಯುವುದು. ಮೇ 27 ರಂದು ಬೆಳಗ್ಗೆ 5 ರಿಂದ ಅಭಿಷೇಕ, ಉಷ:ಪೂಜೆ, ಗಣಹೋಮ, ತ್ರಿಕಾಲ ಪೂಜೆ, ಅಂಕುರಪೂಜೆ, ಕಲಶಾಧಿವಾಸ, ಕುಂಭೇಶ ಕರ್ಕರಿ, ದ್ರವ್ಯ ಕಲಶ ಪೂಜೆ, ಪರಿಕಲಶ ಪೂಜೆ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ತ್ರಿಕಾಲ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆ ನಡೆಯಲಿದೆ.
ಮೇ 28 ರಂದು ಬೆಳಗ್ಗೆ 6 ರಿಂದ ಗಣಹೋಮ, ದ್ರವ್ಯಕಲಶಾಭಿಷೇಕ, ಮಹಾಪೂಜೆ, ಶ್ರೀ ಭೂತಬಲಿ ಉತ್ಸವ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ರಂಗಪೂಜೆ, ಸಂಜೆ 5 ರಿಂದ ಓಟಂತುಳ್ಳಲ್, ಸಂಜೆ 6 ರಿಂದ ಧಾರ್ಮಿಕ ಸಭೆ, ರಾತ್ರಿ 8 ರಿಂದ ಸೂರ್ಯ ಸಂಗೀತಂ, ರಾತ್ರಿ 9 ರಿಂದ ಯಕ್ಷಗಾನ ಬಯಲಾಟ ಜರಗಲಿದೆ.