ಉಪ್ಪಳ: ಎಕ್ರೆಕಟ್ಟಲೆ ಸರಕಾರಿ ಭೂಮಿಗಳಿರುವ ಮಂಜೇಶ್ವರ ತಾಲೂಕು ವ್ಯಾಪ್ತಿಯ ಹಲವು ಪ್ರದೇಶಗಳು ಇದೀಗಲೂ ಭಾರೀ ಹಿನ್ನಡೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಫುಡ್ ಪಾರ್ಕ್ ಸಹಿತ ಇತರ ವ್ಯಾಣಿಜ್ಯ ಉತ್ಪನ್ನಗಳ ಬೆಳವಣಿಗೆಗಳಿಗೆ ಸರಕಾರ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಮಂಜೇಶ್ವರ ಚೇಂಬರ್ ಓಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‍ನ ಶುಕ್ರವಾರ ಉಪ್ಪಳದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಒತ್ತಾಯಿಸಲಾಯಿತು. ವಿಸ್ಕøತವಾದ ಉದ್ಯೋಗ ಸೃಷ್ಟಿಗೆ ಸಾಧ್ಯತೆಗಳಿರುವ ಯೋಜನೆಗಳನ್ನು ಸರಕಾರ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗಾಗಿ ಮೀಸಲಿರಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಕಾಸರಗೋಡು ಚೇಂಬರ್ ಓಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದಾಲಿ ಸಭೆ ಉದ್ಘಾಟಿಸಿದರು. ಅಬ್ದುಲ್ ನಾಸರ್ ಎನ್ ಎ, ಖಮರುದ್ದೀನ್ ತಳಂಗೆರೆ ಉಪಸ್ಥಿತರಿದ್ದು ಮಾತನಾಡಿದರು.
ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಚೇಂಬರ್ ಆಫ್ ಕಾಮರ್ಸ್-ಇಂಡಸ್ಟ್ರೀಸ್ ಮಂಜೇಶ್ವರ ವಿಭಾಗದ ಸಮಿತಿಯ ಪದಾಧಿಕಾರಿಗಳನ್ನು ಈ ಸಂದರ್ಭ ಆರಿಸಲಾಯಿತು. ಅಬ್ದುಲ್ ಲತೀಫ್ ಉಪ್ಪಳ ಗೇಟ್(ರಕ್ಷಾಧಿಕಾರಿ), ಕೆ.ಎಫ್ ಇಕ್ಬಾಲ್ ಉಪ್ಪಳ(ಅಧ್ಯಕ್ಷ), ಮೆಹಮ್ಮೂದ್ ಕೈಕಂಬ, ಶ್ರೀನಿವಾಸ ಪೈ, ಅಬು ತಮಾಂ(ಉಪಾಧ್ಯಕ್ಷರುಗಳು), ತಂಬಾನ್ ಸಿ.ನಾಯರ್ (ಪ್ರಧಾನ ಕಾರ್ಯದರ್ಶಿ), ಗೋಲ್ಡನ್ ಮೂಸಾಕುಂಞÂ, ರಾಶೀದ್ ರೋಡ್ ಕ್ಲಬ್, ಬಶೀರ್ ಮಿನಾರ್(ಜೊತೆ ಕಾರ್ಯದರ್ಶಿಗಳು), ಡಾ.ಪಾವೂರ್ ಮೊಹಮ್ಮದ್ (ಖಜಾಂಜಿ) ಹಾಗೂ ಶಫೀಕ್, ಪಿ.ಬಿ.ರಸಾಕ್, ಡಿ.ಎಂ.ಬಶೀರ್ ಬಂದ್ಯೋಡು, ಹನೀಫ್ ಗೋಲ್ಡ್‍ಕಿಂಗ್, ಡಾ.ಪ್ರಸಾದ್, ಬದ್ರುದ್ದೀನ್ ಕೆಎಂಕೆ, ಯೂಸುಫ್ ಪೈನ್ ಗೋಲ್ಡ್ಸ್, ಅಬ್ದಲ್ಲ ಮಾದೇರಿ, ಸಿಯಾದ್ ರೀಮಾ ಸ್ಟುಡಿಯೋ, ಓ.ಕಕೃಷ್ಣ, ರವಿ.ನಾಯ್ಕಾಪು, ಮುಕ್ತಾರ್ ಉದ್ಯಾವರ, ಸಾದಿಕ್ ಬಳ್ಳೂರು, ಝಡ್.ಎ.ಕಯ್ಯಾರ್, ಸಿಸ್ಟರ್ ಸೆಲಿನಾ, ರೀಯಾಸ್, ನ್ಯಾಯವಾದಿ ಕರೀಂ ಪೂನಾ, ಅಶ್ರಫ್ ಕಾರ್ಳೆ, ಉಮ್ಮರ್ ರಜಾಕ್ ಅವರನ್ನು ಸದಸ್ಯರನ್ನಾಗಿ ಈ ಸಂದರ್ಭ ಆರಿಸಲಾಯಿತು.