ಕಾಸರಗೋಡು: ಲೋಕಸಭೆ ಚುನಾವಣೆ ಮತಗಣನೆ ಸಂಬಂಧ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ತಿಳಿಸಿರುವರು.
ಮೆರವಣಿಗೆ ನಡೆಸುವುದಿದ್ದಲ್ಲಿ ಪೂರ್ವದಲ್ಲೇ ಪೊಲೀಸ್ ಅನುಮತಿ ಪಡೆಯಬೇಕು. ಗೂಡ್ಸ್ ಕೇರೇಜ್ ವಾಹನಗಳು, ಓಪನ್ ಲಾರಿಗಳು ಇತ್ಯಾದಿಗಳ ಮೂಲಕ ಜನರನ್ನು ಒಯ್ಯುವುದನ್ನು, ಮೆರವಣಿಗೆ ನಡೆಸುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಅಂಥಾ ವಾಹನಗಳ ಪರವಾನಗಿ ರದ್ದು ಸಹಿತ ಕಾನೂನು ಕ್ರಮಕೈಗೊಳ್ಳಲಾಗುವುದು. ವಿಜಯೋತ್ಸವ ಆಚರಿಸುವುದಿದ್ದಲ್ಲಿ ಅದು ನಿಯಂತ್ರಣಾತೀತವಾಗಿರಬಾರದು. ಮೆರವಣಿಗೆ ವೇಳೆ ಅಥವಾ ಬೇರೆ ಸಂದರ್ಭದಲ್ಲಿ ಘರ್ಷಣೆ ಸಹಿತ ಕಾನೂನುಭಂಗ ಪ್ರಕರಣಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಚಾರ ಮೊಟಕು, ಸಾರ್ವಜನಿಕರಿಗೆ ತೊಂದರೆ ಇತ್ಯಾದಿ ನಡೆಯುವಂತೆ ಮೆರವಣಿಗೆ ನಡೆಯದಂತೆ ಪ್ರತ್ಯೇಕ ಗಮನ ಹರಿಸಬೇಕು. ಮೋಟಾರು ಬೈಕ್ ರ್ಯಾಲಿ ನಿಷೇಧಿಸಲಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.