ಕಾಸರಗೋಡು: ಪ್ರಸ್ತುತ ಸಾಲಿನಲ್ಲಿ(2018-19) ಹತ್ತನೇ ತರಗತಿ ಪೂರೈಸಿದ ವಿದ್ಯಾರ್ಥಿಗಳಿಗಾಗಿ ಪ್ಲಸ್ ವನ್ ಪ್ರವೇಶಾತಿ ಸಂಬಂಧ ಏಕಗವಾಕ್ಷಿ ಸೌಲಭ್ಯ ಸಹಿತ ವಿದ್ಯಾರ್ಥಿ ಸಂಶಯ ನಿವಾರಣೆ ಉದ್ದೇಶದಿಂದ ನಾಯನ್ಮಾರುಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ಕೆರಿಯರ್ ಗೈಡೆನ್ಸ್ ಆಂಡ್ ಅಡೋಲಸೆಂಟ್ ಕೌನ್ಸಿಲಿಂಗ್ "ಹೆಲ್ಪ್ ಡೆಸ್ಕ್" ಶುಕ್ರವಾರ ಆರಂಭಗೊಂಡಿದೆ.
ಮೇ 16 ವರೆಗೆ ಈ ಹೆಲ್ಪ್ ಡೆಸ್ಕ್ ಚಟುವಟಿಕೆ ನಡೆಸಲಿದೆ. ಪ್ಲಸ್ ವನ್ ಗೆ ಏಕಗವಾಕ್ಷಿ ಸೌಭ್ಯ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗಾಗಿ ಈ ಸಂದರ್ಭ ಓರಿಯಂಟೇಷನ್ ತರಗತಿಯೂ ನಡೆಯಿತು. ಏಕಗವಾಕ್ಷಿ ಪ್ರವೇಶಾತಿ ಸೌಲಭ್ಯ, ವಿವಿಧ ಕ್ಯಾಂಪಸ್, ನೌಕರಿ ಸಾಧ್ಯತೆ ಇತ್ಯಾದಿಗಳ ಕುರಿತು ತರಗತಿ ನಡೆಯಿತು.
ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ. ಅವರು ಡೆಸ್ಕ್ ಮತ್ತು ಓರಿಯಂಟೇಷನ್ ತರಗತಿಯ ಉದ್ಘಾಟನೆ ನಡೆಸಿದರು. ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹಸೈನಾರ್ ಅಧ್ಯಕ್ಷತೆ ವಹಿಸಿದರು. ಇರಿಯಣ್ಣಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಕೆ.ಚಂದ್ರನ್ ತರಗತಿ ನಡೆಸಿದರು. ನಾಯನ್ಮಾರುಮೂಲೆ ಶಾಲೆಯ ಮುಖ್ಯಶಿಕ್ಷಕ ಟಿ.ಪಿ.ಮಹಮ್ಮದಾಲಿ ಸ್ವಾಗತಿಸಿ. ಕೆರಿಯರ್ ಗೈಡ್ ಸುಮೇಶ್ ಮುನಂಬತ್ ವಂದಿಸಿದರು.