ಕಾಸರಗೋಡು: ಕೇರಳ ರಾಜ್ಯ ಕಾನೂನುಸೇವಾ ಪ್ರಾಧಿಕಾರದ ನೇತೃತ್ವದಲ್ಲಿ "ನಿಮ್ಮ ಮನೆಯಂಗಳಕ್ಕೆ ಕಾನೂನು ಸಹಾಯ" ಎಂಬ ಸಂದೇಶದೊಂದಿಗೆ ಮೊಬೈಲ್ ಅದಾಲತ್ ನಾಳೆಯಿಂದ (ಮೇ 16ರಿಂದ) 30 ವರೆಗೆ ಸಂಚಾರ ನಡೆಸಲಿದೆ.
ಸಂಚರಿಸುವ ಬಸ್ ಒಂದರಲ್ಲಿ ಸಿದ್ಧಪಡಿಸಿದ ಕಚೇರಿಯಲ್ಲಿ ಅದಾಲತ್ ನಡೆಯಲಿದೆ. ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ ನಾಳೆ(ಮೇ 16)ಯಿಂದ 23 ವರೆಗೆ, ಹೊಸದುರ್ಗ, ವೆಳ್ಳರಿಕುಂಡ್ ತಾಲೂಕುಗಳಲ್ಲಿ ಮೇ 24ರಿಂದ 30 ವರೆಗೆ ಅದಾಲತ್ ನಡೆಸುವ ಬಸ್ ಸಂಚಾರ ನಡೆಸಲಿದೆ. ಈ ತಾಲೂಕುಗಳ ವಿವಿಧ ಕೇಂದ್ರಗಳಲ್ಲಿ ದೂರುಗಳನ್ನು ಸ್ವೀಕರಿಸಿ, ತೀರ್ಪು ನೀಡಲಾಗುವುದು. ಆಸ್ತಿ ವಿವಾದ, ಕೌಟುಂಬಿಕ ಸಮಸ್ಯೆ, ಸರಕಾರಿ ಸೌಲಭ್ಯಗಳ ಸಂಬಂಧ ತಗಾದೆಗಳು, ಬ್ಯಾಂಕ್ ವ್ಯಾಜ್ಯಗಳು ಇತ್ಯಾದಿಗಳನ್ನು ಈ ವೇಳೆ ಪರಿಶೀಲಿಸಲಾಗುವುದು.
ಈ ಹಿನ್ನೆಲೆಯಲ್ಲಿ ನಾಳೆ(16)ಬೆಳಿಗ್ಗೆ 10.30ಕ್ಕೆ ಕಾಸರಗೋಡು ನ್ಯಾಯಲಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ನ್ಯಾಯಮೂರ್ತಿ ಮನೋಹರ್ ಎಸ್.ಕಿಣಿ ಅವರು ಅದಾಲತ್ ಬಸ್ ಗೆ ಹಸುರು ನಿಶಾನೆ ತೋರಿಸಿ ಚಾಲನೆ ನೀಡುವರು. ಜನತೆ ಈ ಅದಾಲತ್ ನ ಗರಿಷ್ಠ ಮಟ್ಟದ ಸದುಪಯೋಗ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ಉಪನ್ಯಾಯಮೂರ್ತಿ ಫಿಲಿಪ್ ಥಾಮಸ್ ತಿಳಿಸಿರುವರು. ಮಾಹಿತಿಗೆ ಕಾರ್ಯದರ್ಶಿ, ಜಿಲ್ಲಾ ಲೀಗಲ್ ಸರ್ವೀಸ್ ಅಥಾರಿಟಿ, ಕೋರ್ಟ್ ಕಾಂಪ್ಲೆಕ್ಸ್. ದೂರವಾಣಿ: 04994-256189. ಎಂಬ ವಿಳಾಸವನ್ನು ಸಂಪರ್ಕಿಸಬಹುದು.