ಪೆರ್ಲ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ಎಣ್ಮಕಜೆ ಪಂಚಾಯತಿ ಸಮಿತಿಯ ವಾರ್ಷಿಕ ಮಹಾಸಭೆ ಪೆರ್ಲ ಮರಾಟಿ ಬೊರ್ಡಿಂಗ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ ಅಡ್ಕಸ್ಥಳ ವಹಿಸಿದ್ದರು. ರಾಜ್ಯ ಸಮಿತಿ ಅಧ್ಯಕ್ಷ ರಾಧಾಕೃಷ್ಣ ವೈ ಉದ್ಘಾಟಿಸಿದರು. ಕೇರಳ-ಕರ್ನಾಟಕ ಮರಾಟಿ ಫೆಡರೇಶನ್ ನ ಅಧ್ಯಕ್ಷ ಸುಬ್ರಾಯ ನಾಯ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೆ.ಎಂ.ವೈಜಿ.ಸಿ ಅಧ್ಯಕ್ಷ ರಾಧಾಕೃಷ್ಣ ಮಾಸ್ತರ್, ಕೃಷ್ಣ ಮಾಸ್ತರ್ ಪೆಲ್ತಾಜೆ, ಲೀಲಾ ಟೀಚರ್, ವಿಶ್ವನಾಥ ನಾಯ್ಕ, ದಿನೇಶ್ ಬೆಂಗಳೂರು, ಪದ್ಮನಾಭ ಪೆಲ್ತಾಜೆ, ಪರಮೇಶ್ವರ ನಾಯ್ಕ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ರವೀಂದ್ರ ನಾಯ್ಕ ಮಣಿಯಂಪಾರೆ ಸ್ವಾಗತಿಸಿ, ರಾಜೇಶ್ ಬಜಕ್ಕೂಡ್ಲು ವಂದಿಸಿದರು. ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು. ನಾರಾಯಣ ನಾಯಕ್ ಖಂಡಿಗೆ(ಅಧ್ಯಕ್ಷ), ಚಂದ್ರಶೇಖರ ನಾಯ್ಕ ಸುಂದರಗಿರಿ(ಕಾರ್ಯದರ್ಶಿ), ಜಯಕೃಷ್ಣ ಸ್ವರ್ಗ(ಖಜಾಂಜಿ) ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.