ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಡೆಯುವ ಸಾಧ್ಯತೆ ಇದೆ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನಾ ವರದಿ ಹೇಳಿದೆ.
2019 ರ ಲೋಕಸಭಾ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, 900 ಮಿಲಿಯನ್ ಜನರು ಮತದಾನ ನಡೆಸಲಿದ್ದಾರೆ. ಇನ್ನು ಮೂರು ಹಂತಗಳಲ್ಲಿ ನಡೆಯಲಿರುವ ಮತದಾನದಲ್ಲಿ ಸಣ್ಣ ಪ್ರಮಾಣದ ಏರಿಕೆಯಾದರೂ ಸಹ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಮತದಾನ ನಡೆಯುವ ಸಾಧ್ಯತೆ ಇದೆ.
ಮೇ.6 ರಂದು 5 ನೇ ಹಂತದ ಮತದಾನ ನಡೆಯಲಿದ್ದು, 4 ನೇ ಹಂತದ ಮತದಾನದ ನಂತರ ಮತದಾನದ ಪ್ರಮಾಣ ಶೇ.67 ರಷ್ಟಿದೆ. 2014 ರಲ್ಲಿ ಮತದಾನ ಶೇ.67.6 ರಷ್ಟಿತ್ತು ಎಂದು ಎಸ್ ಬಿಐ ಎಕೋವ್ರಾಪ್ ವರದಿ ಹೇಳಿದೆ.
ಇದೇ ಮಾದರಿಯ ಟ್ರೆಂಡ್ ಮುಂದುವರೆದರೆ ಕಳೆದ ಬಾರಿಗಿಂತ ಈ ಬಾರಿಯ ಮತದಾನದ ಪ್ರಮಾಣ ಏರಿಕೆಯಾಗಲಿದೆ 4 ನೇ ಹಂತದ ಮತದಾನದ ನಂತರ ಶೇ.1 ರಷ್ಟು ಮತದಾನ ಹೆಚ್ಚಿದರೂ ಅದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಮಾಣದ ಮತದಾನ ಆಗಿರಲಿದೆ ಎಂದು ಎಸ್ ಬಿ ಐ ವರದಿ ತಿಳಿಸಿದೆ.