ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆ ಬರೆದ 165 ಮಂದಿ ವಿದ್ಯಾರ್ಥಿಗಳಲ್ಲಿ 147 ಮಂದಿ ತೇರ್ಗಡೆಗೊಂಡು (ಶೇ.90)ಉನ್ನತ ಶಿಕ್ಷಣಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ನಾಲ್ಕು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶ್ರೇಣಿ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಶರಣ್ ವತ್ಸ(1184), ಸಜಿತ್ ಎಂ. (1171) ಇಬ್ಬರೂ ದ್ವೀತಿಯ ವರ್ಷದಲ್ಲಿ ಸಂಪೂರ್ಣ 600 ಅಂಕವನ್ನು ಪಡೆದಿರುತ್ತಾರೆ. ಕಲಾ ವಿಭಾಗದ ಕುಮಾರಿ ವೈಷ್ಣವಿ (1130), ವಾಣಿಜ್ಯ ವಿಭಾಗದ ತನುಜ (1111) ಅಂಕ ಪಡೆದು ಎಲ್ಲಾ ವಿಷಯದಲ್ಲಿ ಎ ಪ್ಲಸ್ ಗಳಿಸಿರುತ್ತಾರೆ. ಎತಿನ್ ಪ್ರಸಾದ್, ಆಬಿದಾ ಯಾಸ್ಮಿನ್, ಶ್ರುತಿ ಕೆ, ಕದೀಜತ್ ತಸ್ಲೀನಾ,ದೀಕ್ಷಿತ್, ಹೇಮಂತ ಎಂಬೀ ವಿದ್ಯಾರ್ಥಿಗಳು 5 ವಿಷಯಗಳಲ್ಲಿ ಎ ಪ್ಲಸ್ ಹಾಗೂ ಒಂದು ವಿಷಯದಲ್ಲಿ ಎ ಗ್ರೇಡ್ ನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಸಂಜೀವ ರೈ, ಶಾಲಾ ಮೆನೇಜರ್ ಮಿತ್ತೂರ್ ಪುರುಷೋತ್ತಮ ಭಟ್, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಅಧ್ಯಾಪಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.