ಬದಿಯಡ್ಕ: ಭಜನೆಯ ಮೂಲಕ ಆಧ್ಯಾತ್ಮಕ ಭಕ್ತಿ ಸಾಧನೆಯ ಜೊತೆಗೆ ಸಾಮಾಜಿಕ ಒಗ್ಗಟ್ಟು_ಏಕತೆಯನ್ನು ಪಡೆಯಲು ಸಾಧ್ಯವಿದೆ. ಅನುಗ್ರಹ ಪ್ರಾಪ್ತಿಗೆ ಪೂರಕವಾದ ಭಜನಾ ಸತ್ಸಂಗವು ವ್ಯಕ್ತಿತ್ವ ನಿರ್ಮಾಣ, ಅಂತರಂಗ ಶುದ್ದತೆ ಮತ್ತು ಸಾಮಾಜಿಕ ಭದ್ರತೆಗೆ ಬಲ ನೀಡುತ್ತದೆ ಎಂದು ಖ್ಯಾತ ಭಜನಾ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ತಿಳಿಸಿದರು.
ನೀರ್ಚಾಲು ಸಮೀಪದ ಮಾನ್ಯ ಶ್ರೀವೆಂಕಟರಮಣ ದೇವಾಲಯದಲ್ಲಿ ಭಾನುವಾರ ಆರಂಭಗೊಂಡ ಭಜನಾ ತರಬೇತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಜನಾ ಸಂಕೀರ್ತನೆಯ ಕ್ರಮಬದ್ದ ಆಲಾಪನೆಯ ಬಗ್ಗೆ ಮಾರ್ಗದರ್ಶನ ನೀಡುವ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮಂಜುನಾಥ ಸಿ.ಎಚ್, ವಿನಯಕುಮಾರ್ ಎಂ.ಎಸ್ ಉಪಸ್ಥಿತರಿದ್ದು ಶುಭಹಾರೈಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನವೀನಚಂದ್ರ ಮಾಸ್ತರ್ ಮಾನ್ಯ ಸ್ವಾಗತಿಸಿ, ಜಯಲಕ್ಷ್ಮೀ ಟೀಚರ್ ವಂದಿಸಿದರು.