ಮುಳ್ಳೇರಿಯ: ವಿನಮ್ರತೆ ಕಲಾವಿದನನ್ನು ಬಲು ಎತ್ತರಕ್ಕೆ ಕೊಂಡೊಯ್ಯುತ್ತದೆ. ವಿನಮ್ರತೆ ಮತ್ತು ಸಹನಶೀಲತೆಯಿಂದ ಯಕ್ಷಗಾನ ಕಲೆಯನ್ನೂ, ಕಲಾ ಸಂಘವನ್ನೂ ಕಟ್ಟಿ ಬೆಳೆಸಿದವರು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಿಸಿದರು.
ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಎಪ್ಪತ್ತೈದು ವರ್ಷಗಳ ಹಿಂದೆ ಸ್ಥಾಪನೆಯಾದ ಯಕ್ಷಗಾನ ಕಲಾ ಸಂಘ ಕಲಾವಿದರನ್ನು ಬೆಳೆಸಿ, ಕಲೆಯನ್ನು ಬೆಳಗಿಸಿದೆ. ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕøತಿಕ ಕ್ರಾಂತಿಯನ್ನು ಮಾಡಲು ಸಾಧ್ಯವಾಗಿದೆ. ಇಂದಿಗೂ ಯಕ್ಷಗಾನ ಕಲೆ ಮತ್ತು ಕಲಾವಿದನ ಬೆಳವಣಿಗೆಗೆ ಪೆÇ್ರೀತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾರ್ಥ ನೀಡುವ `ಕೀರಿಕ್ಕಾಡು ಪ್ರಶಸ್ತಿ'ಯನ್ನು ಹಿರಿಯ ಕಲಾವಿದ ಬಿ.ಗೋಪಾಲಕೃಷ್ಣ ಕುರುಪ್ ಶಿಶಿಲ ಅವರಿಗೆ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಸಾಹಿತಿ ಪೆÇ್ರ|ವಿ.ಬಿ.ಅರ್ತಿಕಜೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಮಾನಂದ ಬನಾರಿ ರಚಿಸಿದ `ಹಾರಿಹೋದ ಹಕ್ಕಿ' ಕೃತಿಯನ್ನು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಕೃತಿಯ ಕುರಿತು ಮಾತನಾಡಿದರು.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಾ.ರಮಾನಂದ ಬನಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸದಾಶಿವ ರೈ ಬೆಳ್ಳಿಪ್ಪಾಡಿ ವಂದಿಸಿದರು. ನಾರಾಯಣ ದೇಲಂಪಾಡಿ ಮತ್ತು ಚಂದ್ರಶೇಖರ ಏತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಉಪಸ್ಥಿತರಿದ್ದರು.
ವಿವಿಧ ಕಾರ್ಯಕ್ರಮಗಳು : ಶ್ರೀ ಗೋಪಾಕೃಷ್ಣ ದೇವರ ಪೂಜೆಯೊಂದಿಗೆ ಆರಂಭವಾದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಚೆಂಡೆ ಮದ್ದಳೆ ಝೇಂಕಾರ, ಯಕ್ಷಗಾನ ಪತ್ರಿಕೋದ್ಯಮ ವಿಚಾರಗೋಷ್ಠಿ, `ಸೀತಾಪಹಾರ' ಯಕ್ಷಗಾನ ತಾಳಮದ್ದಳೆ ಮತ್ತು `ಕುಶಲವ, `ಶ್ರೀಕೃಷ್ಣ ವಿಜಯ' ಎಂಬ ಎರಡು ಯಕ್ಷಗಾನ ಬಯಲಾಟಗಳು ಪ್ರದರ್ಶನಗೊಂಡವು.