ಬದಿಯಡ್ಕ : ನೀರ್ಚಾಲು ಸಮೀಪದ ಪಡಿಯಡ್ಪು ನಿವಾಸಿ ದಿ.ಬಾಬು ಅವರ ಪತ್ನಿ ಪದ್ಮಾವತಿ (57) ಎಂಬವರ ಕರುಳಿಗೆ ಕ್ಯಾನ್ಸರ್ ಬಾಧಿಸಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಇವರ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.
ಕಳೆದ ಒಂದು ವರ್ಷದ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಕಾಸರಗೋಡು ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಆದರೂ, ಹೆಚ್ಚಿನ ಚಿಕಿತ್ಸೆಗೆ ಹಣದ ಅಗತ್ಯವಿದೆ. ಪುತ್ರಿಯ ವಿವಾಹವಾಗಿದ್ದು, ಇಬ್ಬರು ಗಂಡು ಮಕ್ಕಳೊಂದಿಗೆ ಬದುಕುತ್ತಿದ್ದು, ಈ ಮಧ್ಯೆ ಕಟ್ಟಡ ಕಾರ್ಮಿಕನಾಗಿದ್ದ ಕಿರಿಯ ಪುತ್ರ ಕೆಲಸದ ಮಧ್ಯೆ ಬಿದ್ದು ಅಶಕ್ತನಾಗಿದ್ದಾರೆ.
ಹಿರಿಯ ಪುತ್ರ ಬಾಲಕೃಷ್ಣ ಆಟೋ ಚಾಲಕನಾಗಿದ್ದು, ಕುಟುಂಬದ ಏಕೈಕ ಆಸರೆಯಾಗಿದ್ದಾರೆ. ನೀರ್ಚಾಲು ನಿವೇದಿತಾ ಸೇವಾ ಮಿಷನ್ ಕಾರ್ಯಕರ್ತರು ಧನಸಹಾಯ ಅಭಿಯಾನ ಹಮ್ಮಿಕೊಂಡಿದ್ದಾರೆ. ದಾನಿಗಳು ಈ ವಿಳಾಸಕ್ಕೆ ನೆರವು ನೀಡಲು ಮನವಿ ಮಾಡಲಾಗಿದೆ.
ಬಾಲಕೃಷ್ಣ ಪಿ.ಬಿ., ಕಾಸರಗೋಡು ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸೀತಾಂಗೋಳಿ ಶಾಖೆ, ಬ್ಯಾಂಕ್ ಖಾತೆ ಸಂಖ್ಯೆ : 150341200420493, ಐಎಫ್‍ಎಸ್‍ಸಿ ಕೋಡ್ :ಐಬಿಕೆಎಲ್0450ಟಿಕೆಡಿ. ಸಂಪರ್ಕ : 9846154159