ಬದಿಯಡ್ಕ: ಬಾಲಗೋಕುಲ ಕಾಸರಗೋಡು ತಾಲೂಕಿನ ಎಲ್ಲ ಬಾಲಗೋಕುಲಗಳ ಶಿಕ್ಷಕಿಯರು ಮತ್ತು ಕಾರ್ಯಕರ್ತರಿಗೆ ಒಂದು ದಿನದ ಅಭ್ಯಾಸ ವರ್ಗವು ನೀರ್ಚಾಲಿನ ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಬೆಳಿಗ್ಗೆ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಅವರು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಶಿಬಿರಾರ್ಥಿಗಳಿಗೆ ವಿವಿಧ ತರಗತಿಗಳಲ್ಲಾಗಿ ವಿವಿಧ ವಿಷಯಗಳ ಮಾರ್ಗದರ್ಶನ ನಡೆಯಿತು. ಭಗವದ್ಗೀತೆ, ದೇಶಭಕ್ತಿ ಗೀತೆ, ರಾಮ ಸ್ತೋತ್ರ, ಭಜನೆ ಇತ್ಯಾದಿ ವಿಷಯಗಳ ಪಠನ ನಡೆಯಿತು. ಅಪರಾಹ್ನ ಸೈಜನ್ ಮಾಸ್ತರ್ ಅವರು `ಭಾರತ ದರ್ಶನ' ಎಂಬ ಉದ್ಭೋದಕವಾದ ಕಾರ್ಯಕ್ರಮ ನಡೆಸಿಕೊಟ್ಟರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ ಚೆಟ್ಟಿಯಾರ್ ಅವರು ಸಮಾರೋಪ ಸಮಾರಂಭದಲ್ಲಿ ಪ್ರಮುಖ ಭಾಷಣ ಮಾಡಿದರು. ತಾಲೂಕಿನ ಎಲ್ಲ ಮಂಡಲ ಗಳಿಂದ ಸುಮಾರು 330 ಬಾಲಗೋಕುಲ ಶಿಕ್ಷಕಿಯರು ಭಾಗವಹಿಸಿದ್ದರು. ಬಾಲಗೋಕುಲದ ನೂತನ ವರ್ಷದ ಪದಾಧಿಕಾರಿಗಳ ಘೋಷಣೆಯನ್ನು ಗೋಪಾಲ ಚೆಟ್ಟಿಯಾರ್ ಮಾಡಿದರು.