ಕುಂಬಳೆ: ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು) ಸ್ಥಾಪನಾ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಭಾನುವಾರ ಕುಂಬಳೆ ಶಾಂತಿಪಳ್ಳದ ಮಂದಾರ ನಿವಾಸದಲ್ಲಿ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಲ್.ಮಹೇಶ್ವರ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಎನ್‍ಟಿಯು ಜಿಲ್ಲಾಧ್ಯಕ್ಷ ಕುಂಞÂಂಬು ವಿ ಅಧ್ಯಕ್ಷತೆ ವಹಿಸಿದ್ದರು. ಎನ್‍ಟಿಯು ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಮಾಸ್ತರ್ ಬಾಡೂರು, ಪ್ರಾಂತ್ಯ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಕಯ್ಯಾರ್ ಉಪಸ್ಥಿತರಿದ್ದು ಶುಭಹಾರೈಸಿದರು. ಕುಂಬಳೆ ಉಪಜಿಲ್ಲಾ ಘಟಕಾಧ್ಯಕ್ಷೆ ಕವಿತಾ ಟೀಚರ್ ಸ್ವಾಗತಿಸಿ, ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್ ವಂದಿಸಿದರು. ಮಂಜೇಶ್ವರ ಉಪಜಿಲ್ಲಾಧ್ಯಕ್ಷ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಉಮಾ ಟೀಚರ್ ಪ್ರಾರ್ಥನಾ ಗೀತೆ ಹಾಡಿದರು. ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ರಾಜೇಶ್ ವಾರಿಯರ್ ಕಣ್ಣೂರು ಅವರು ಸಂಘಟನೆ ಮತ್ತು ಅಧ್ಯಾಪಕ ಸಂಘದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.