HEALTH TIPS

ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ಸಾಧನೆ ವರ್ಣನಾತೀತ-ಪ್ರೊ.ಮೂಡಿತ್ತಾಯ

           
       ಕುಂಬಳೆ: ಕನ್ನಡ ಸಾಹಿತ್ಯ ಪರಿಷತ್ತು 105 ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾದುದು. ನಾಲ್ವಡಿ ಕೃಷ್ಣರಾಜ ಒಡೆಯರ್, ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಎಂ.ವಿ.ನಂಜುಂಡಯ್ಯ ಮೊದಲಾದ ಧೀಮಂತರಿಂದ ರೂಪುಗೊಂಡ ಈ ಬೃಹತ್ ಸ್ವಾಯತ್ತ ಸಂಸ್ಥೆ ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವುದು ನಮಗೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಲಶ್ಚೇರಿ ಬ್ರಿನ್ನಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಹಿರಿಯ ಸಾಹಿತಿ, ವ್ಯಂಗ್ಯ ಚಿತ್ರ ಕಲಾವಿದ ಪಿ.ಎನ್.ಮೂಡಿತ್ತಾಯ ಅವರು ಹೇಳಿದರು.
     ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡ ಅಧ್ಯಾಪಕ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ 105 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪರಿಷತ್ತಿನ ಮಹತ್ಸಾಧನೆಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
    ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಯ ಸಂವರ್ಧನೆಗೆ ಕಸಾಪ ಅಹರ್ನಿಶಿ ದುಡಿಯುತ್ತಿದೆ. ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಏಕ ಛತ್ರದಡಿಯಲ್ಲಿ ತರುವುದು ಇದರ ಪ್ರಧಾನ ಉದ್ದೇಶ. ಭಾಷೆ, ಸಾಹಿತ್ಯ, ಸಂಸ್ಕøತಿಗೆ ಧಕ್ಕೆ ಒದಗಿ ಬಂದಾಗ ಇದು ಅವ್ಯಾಹತ ಹೋರಾಟ ನಡೆಸುತ್ತಿದೆ. ಪ್ರಖ್ಯಾತ ಸಾಹಿತಿಗಳು, ಸಂಘಟಕರು, ಕನ್ನಡಪರ ಚಿಂತಕರು ಪರಿಷತ್ತಿನ ಅಧ್ಯಕ್ಷರಾಗಿ ಕಾಲಕಾಲಕ್ಕೆ ಮುನ್ನಡೆಸಿದ್ದಾರೆ. ಪುಸ್ತಕ ಪ್ರಕಟಣೆ, ನಿಘಂಟು ಸಂಪಾದನೆ, ನಶಿಸುತ್ತಿರುವ ಸಾಹಿತ್ಯ ಪ್ರಕಾರಗಳ ಸಂರಕ್ಷಣೆ ಸದಾ ಹಮ್ಮಿಕೊಳ್ಳುತ್ತಿದೆ. ಸಾಹಿತ್ಯ-ಸಂಸ್ಕøತಿ ಪರ ಹಲವು ಉಪನ್ಯಾಸ, ವಿಚಾರಗೋಷ್ಠಿ, ಚಿಂತನ-ಮಂಥನ, ತರಬೇತಿ ಶಿಬಿರ ಇತ್ಯಾದಿ ನಾಡಿನಾದ್ಯಂತ ನಡೆಸುತ್ತಿದೆ. ವರ್ಷಂಪ್ರತಿ ಅದ್ದೂರಿ ಸಾಹಿತ್ಯ ಸಮ್ಮೇಳನ ನಡೆಸಿ ಜನಜಾಗೃತಿ ಉಂಟು ಮಾಡುತ್ತಿದೆ. ತಾಲೂಕು ಮಟ್ಟದಲ್ಲಿ ಹಾಗು ಹೋಬಳಿ ಮಟ್ಟದಲ್ಲಿ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಯುವ ಪ್ರತಿಭೆಗಳನ್ನು ಹುರಿದುಂಬಿಸುತ್ತಿದೆ. ಸಾವಿರಕ್ಕಿಂತ ಹೆಚ್ಚು ದತ್ತಿ ಕಾರ್ಯಕ್ರಮ, ಹಲವು ಸಮಾವೇಶ ನಡೆಸುತ್ತಿದೆ. ಇದು ಬೃಹತ್ ಪುಸ್ತಕ ಭಂಡಾರವನ್ನು ಹೊಂದಿದ್ದು, ಅನಘ್ರ್ಯ ರತ್ನಗಳಂತ ಪುಸ್ತಕಗಳನ್ನು ಓದುಗರಿಗೆ ಒದಗಿಸಿಕೊಡುತ್ತಿದೆ. ಹಲವು ಶಾಲಾ ಕಾಲೇಜು ವಾಚನಾಲಯಗಳಿಗೆ ಉಚಿತವಾಗಿ ನೀಡುತ್ತಿದೆ. ಕಾವ, ಜಾಣ, ರನ್ನ ಮೊದಲಾದ ಪರೀಕ್ಷೆಗಳನ್ನು ನಡೆಸಿ ಓದುಗರ ಅಧ್ಯಯನಕ್ಕೆ ತುಂಬ ಉತ್ತೇಜನ ನೀಡುತ್ತಿದೆ. ಲಕ್ಷಾಂತರ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಜಗತ್ತಿನಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿಸಲು, ಕನ್ನಡದ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸದಾ ದುಡಿಯುತ್ತಿದೆ. ನಿಜಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ಸಾಧನೆ ವರ್ಣನಾತೀತವೆಂದು ಪಿ.ಎನ್.ಮೂಡಿತ್ತಾಯ ಅಭಿಪ್ರಾಯಪಟ್ಟರು.
    ಅತಿಥಿಗಳಾಗಿದ್ದ ಅಧ್ಯಾಪಕ ಶ್ರೀಶ ಕುಮಾರ್ ಪಂಜಿತ್ತಡ್ಕ ಅವರು ಕೇರಳ ಗಡಿನಾಡ ಘಟಕದ ಕಾರ್ಯವೈಖರಿಯ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದರು. ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ. ಸ್ವಾಗತಿಸಿ,ಕಾರ್ಯಕಾರಿ ಸಮಿತಿ ಸದಸ್ಯ ಸುಂದರ ಬಾರಡ್ಕ ವಂದಿಸಿದರು. ಪರಿಷತ್ತಿನ ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries