ಕಾಸರಗೋಡು: ಕೂಡ್ಲು ರಾಮದಾಸನಗರ ಶಾಸ್ತಾ ನಗರದಲ್ಲಿ ಪುನರ್ ನಿರ್ಮಿತ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರ ಸ್ಥಾಪನೆ ಕಾರ್ಯಕ್ರಮ ಮೇ 23 ರಿಂದ 26 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮೇ 23 ರಂದು ಬೆಳಗ್ಗೆ 8 ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಂಜೆ 6.30 ರಿಂದ ಧಾರ್ಮಿಕ ಹಾಗು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ರಾತ್ರಿ 7.30 ಕ್ಕೆ ಪೂಜೆ, 7.45 ಕ್ಕೆ ನೃತ್ಯ ವೈವಿಧ್ಯಗಳು, 8 ಕ್ಕೆ ಅನ್ನಸಂತರ್ಪಣೆ, 24 ರಂದು ಸಂಜೆ 5.30 ಕ್ಕೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, 6.30 ಕ್ಕೆ ನೃತ್ಯ ವೈವಿಧ್ಯ, ರಾತ್ರಿ 7.30 ರಿಂದ ಪೂಜೆ, ನೃತ್ಯ ವೈಭವ, ಅನ್ನಸಂತರ್ಪಣೆ, 25 ರಂದು ಬೆಳಗ್ಗೆ 7 ಕ್ಕೆ ಅಷ್ಟೋತ್ತರ ಶತನಾಳಿಕೇರ ಗಣಪತಿ ಹೋಮ, 10 ಕ್ಕೆ ಸಾಮೂಹಿಕ ಶ್ರೀ ಶನೈಶ್ವರ ಪೂಜೆ, ಮಧ್ಯಾಹ್ನ 12 ಕ್ಕೆ ಪೂಜೆ, 12.30 ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 2 ರಿಂದ ಭಕ್ತಿಗಾನ ಸುಧಾ, ಸಂಜೆ 5.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ರೇಖಾಚಿತ್ರದ ಮೆರವಣಿಗೆ, ರಾತ್ರಿ 7.30 ರಿಂದ ಪೂಜೆ, ನೃತ್ಯಾರ್ಚನೆ, ಅನ್ನಸಂತರ್ಪಣೆ, ಮಣಿನಾದಂ ನಡೆಯಲಿದೆ.
ಮೇ 26 ರಂದು ಬೆಳಗ್ಗೆ 5.30 ಕ್ಕೆ ಗಣಪತಿ ಹೋಮ, 6.07 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ರೇಖಾಚಿತ್ರ ಸ್ಥಾಪನೆ, 6.30 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12.30 ಕ್ಕೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30 ಕ್ಕೆ ಪೂಜೆ, 8 ಕ್ಕೆ ಅನ್ನಸಂತರ್ಪಣೆ, 9 ರಿಂದ ನಾಟಕ ನಡೆಯಲಿದೆ.