HEALTH TIPS

ತೀವ್ರ ಶುಚೀಕರಣ ಯಜ್ಞ : ಶುಚಿಯಾದ ಹೆದ್ದಾರಿ ಬದಿ ಪ್ರದೇಶಗಳು


                                             
    ಮಂಜೇಶ್ವರ: ಪ್ರತಿಯೊಬ್ಬ ನಾಗರಿಕನೂ ಸ್ವಯಂ ಸ್ಪೂರ್ತಿಯಿಂದ ತ್ಯಾಜ್ಯ ವಿಲೇವಾರಿಯಲ್ಲಿ ಕ್ರಿಯಾತ್ಮಕವಾದ ಜವಾಬ್ದಾರಿಯನ್ನು ನಿರ್ವಹಿಸುವುದು ಕರ್ತವ್ಯವಾಗಿದೆ. ಸಾರ್ವಜನಿಕ ಪ್ರದೇಶಗಳನ್ನು ಕೇಂದ್ರವಾಗಿರಿಸಿ ಮಲಿನ ತ್ಯಾಜ್ಯಗಳನ್ನು ತಂದು ಎಸೆಯುವುದು ಘೋರ ಅಪರಾಧವಾಗಿದೆ. ಮತ್ತು ಪ್ರಕೃತಿಗೆ ನಾವೆಸಗುವ ಪಾತಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ತಿಳಿಸಿದರು.   
    ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಸಲಾದ ತೀವ್ರ ಶುಚೀಕರಣ ಯಜ್ಞದ ಭಾಗವಾಗಿ ಗುರುವಾರ ಗಡಿ ಪ್ರದೇಶ ತಲಪ್ಪಾಡಿಯಲ್ಲಿ ಶುಚೀಕರಣ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
      ಸಾಮಾಜಿಕ ಕಳಕಳಿ ಇಲ್ಲದ ಅನಾಗರಿಕರಿಂದ ಎಸಗಲ್ಪಡುವ ಇಂತಹ ಪರಿಸರ ಮಲಿನೀಕರಣದಿಂದ ಸಂಚಾರ ಮಾರ್ಗಗಗಳು ದುರ್ಗಂಧಪೂರಿತವಾಗಿ ರೇಜಿಗೆ ತರಿಸುತ್ತಿದೆ. ಜೊತೆಗೆ ಹಲವು ಸಾಂಕ್ರಾಮಿಕ ಖಾಯಿಲೆಗಳ ವ್ಯಾಪಕತೆಗೂ ಕಾರಣವಾಗುತ್ತಿದ್ದು ಈ ಸಮಸ್ಯೆಯ ನಿವಾರಣೆಗೆ ಸಾರ್ವಜನಿಕರ ಮುಕ್ತ ಹೃದಯದ ಬೆಂಬಲ ಅಗತ್ಯವಿದೆ ಎಂದು ಅವರು ಕರೆನೀಡಿದರು.
     ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್, ಕಾರ್ಯಕ್ರಮಾಧಿಕಾರಿ ವಿ.ರಂಜಿತ್, ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಕಾಸರಗೋಡು ತಹಶೀಲ್ದಾರ್ ಶಾಹುಲ್ ಹಮೀದ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ಪ್ರಬಂಧಕ ಮಿಥುನ್,   ಮಂಜೇಶ್ವರ ತಹಶೀಲ್ದಾರ್ ಪಿ.ಜಾನ್ ವರ್ಗೀಸ್, ಲೋಕೋಪಯೋಗಿ ಸಹಾಯಕ ಕಾರ್ಯಕಾರಿ ಅಭಿಯಂತರ ಸಿ.ಜೆ.ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ತಲಪ್ಪಾಡಿಯಿಂದ ಮಂಜೇಶ್ವರ ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯ ತೆರವಿಗೆ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ 52 ವಿದ್ಯಾರ್ಥಿ ಪೊಲೀಸ್ ಕೆಡೆಟ್ ಗಳು, ವಿದ್ಯಾರ್ಥಿ ಪೊಲೀಸ್ ಸಮುದಾಯ ಪೊಲೀಸ್ ಅಧಿಕಾರಿ ಉಮೇಶ್ ನಾಯ್ಕ್, ಎ.ಸಿ.ಪಿ.ಒ. ಪಿ.ಜಿ.ಅನಿತಾ, ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ,ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದರು.
    ಏನಿದು ಯೋಜನೆ:
   ಆರೋಗ್ಯ ಜಾಗೃತಿಯ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಿತ ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ಜಿಲ್ಲಾಡಳಿತ ಈ ತೀವ್ರ ಶುಚೀಕರಣ ಯಜ್ಞ ನಡೆಸಿದೆ. ವಿದ್ಯಾರ್ಥಿ ಪೊಲೀಸ್, ರಾಷ್ಟ್ರೀಯ ಸೇವಾ ಯೋಜನೆ, ಕುಟುಂಬಶ್ರೀ , ರೆಸಿಡೆನ್ಸ್ ಅಸೋಸಿಯೇಶನ್, ಉದ್ಯೋಗ ಖಾತರಿ ಯೋಜನೆ, ಸ್ಥಳೀಯ ಯುವಕ ಸಂಘಟನೆಗಳು
, ಹರಿತ ಕ್ರಿಯಾ ಸೇನೆ ಸಹಿತ ಸಂಘಟನೆಗಳ ಕಾರ್ಯಕರ್ತರು ಶುಚೀಕರಣ ನಡೆಸಿದರು.
        ಜಿಲ್ಲೆಯಾದ್ಯಂತ ಶುಚೀಕರಣ ನಡೆದಿದ್ದು, 229.8 ಕಿಮೀ ಉದ್ದದ ಹೆದ್ದಾರಿ ಬದಿ ತ್ಯಾಜ್ಯ ತೆರವು ನಡೆಸಲಾಗಿದೆ. 76.8 ಕಿಮೀ ರಾಷ್ಟ್ರೀಯ ಹೆದ್ದಾರಿ, 29ಕಿಮೀ ಕೆ.ಎಸ್.ಟಿ.ಪಿ.ರಸ್ತೆ, 33 ಕಿಮೀ ರಾಜ್ಯ ಹೆದ್ದಾರಿ, 91 ಕಿಮೀ ಜಿಲ್ಲೆಯ ಪ್ರಧಾನ ರಸ್ತೆಗಳ ಬದಿಗಳಲ್ಲಿ ಈ ಶುಚೀಕರಣ ನಡೆಸಲಾಗಿದೆ. 
              ತಲಪ್ಪಾಡಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡಿನಲ್ಲಿ ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಕಾಲಿಕಡವಿನಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
    ಶುಚೀಕರಣ ನಡೆಸಿದವರಿಗೆ ಮಾಸ್ಕ್, ಗ್ಲೌಸ್, ಗೋಣಿಚೀಲ ಇತ್ಯಾದಿ ಶುಚಿತ್ವ ಮಿಷನ್ ಜಿಲ್ಲಾ ಘಟಕ ಒದಗಿಸಿತ್ತು. ಇವರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಕ್ರಿಯವಾಗಿತ್ತು.
     ಸಂಗ್ರಹಿಸಲಾದ ತ್ಯಾಜ್ಯಗಳನ್ನು ಚೀಮೇನಿಯ ತೋಟಗಾರಿಕೆ ನಿಗಮ, ಪಿಲಿಕೋಡ್ ವಲಯ ಕೃಷಿ ಸಂಶೋಧನೆಕೇಂದ್ರ, ಸೀತಾಂಗೋಳಿ ಕಿನ್ಫ್ರಾ ಸಮೀಪದ ಸರಕಾರಿ ಜಾಗಗಳಲ್ಲಿಇರಿಸಲಾಗಿದ್ದು, ಶೀಘ್ರದಲ್ಲಿ ಪರಿಷ್ಕರಣೆ ನಡೆಸಲಾಗುವುದು ಎಂದು ಸಂಬಂಧ ಪಟ್ಟವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries