ಪೆರ್ಲ: ಪೆರ್ಲದ ಶ್ರೀಸತ್ಯನಾರಾಯಣ ವಿದ್ಯಾಸಂಸ್ಥೆಯ ನೇತ್ವದಲ್ಲಿ ಪ್ರಸ್ತುತ ವರ್ಷ ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕ ಮಹಾಬಲೇಶ್ವರ ಭಟ್ ಚುಳ್ಳಿಕ್ಕಾನ ಅವರನ್ನು ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಪರವಾಗಿ ಪ್ರಬಂಧಕ ಪಿ.ಎಸ್.ವಿಶ್ವಾಮಿತ್ರ ಅವರು ಶಾಲು, ಫಲ ಮಾನಪತ್ರಗಳನ್ನು ನೀಡಿ ಬೀಲ್ಕೊಡಲಾಯಿತು. ಶಾಲಾ ಆಡಳಿತ ಉಪಾಧ್ಯಕ್ಷ ಪಿ.ಸದಾಶಿಬ ಭಟ್, ಪಿ.ವೆಂಕಟ್ರಾಜ ಮಿತ್ರ ಹಾಗೂ ಡಾ.ಎಸ್.ಎನ್.ಭಟ್ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ, ಶಿಕ್ಷಕರು ಉಪಸ್ಥಿತರಿದ್ದರು.