ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಛೇರಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಬ್ಯಾಂಕಿನ ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರುಗಳಾದ ಪಿ.ಜಿ.ಸುಬ್ರಹ್ಮಣ್ಯ ಹೆಬ್ಬಾರ್, ಎಸ್.ಗೋಪಾಲಕೃಷ್ಣ ಭಟ್, ಕೆ.ತಿರುಮಲೇಶ್ವರ ಭಟ್, ಕ್ಲಪ್ತ ಸಮಯಕ್ಕೆ ವ್ಯವಸ್ಥಿತವಾದ ಕಟ್ಟಡವನ್ನು ನಿರ್ಮಿಸಿದ ಅಭಿಯಂತರ ಶಿವಶಂಕರ ಎಮ್.ಜಿ ಮತ್ತು ಗುತ್ತಿಗೆದಾರರಾದ ರಾಜು ಸ್ಟೀಫನ್ ಡಿಸೋಜ ಇವರನ್ನು ಗುರುವಾರ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಎಚ್.ಶಿವರಾಮ ಭಟ್, ಕಾರ್ಯದರ್ಶಿ ಎ.ಕೃಷ್ಣ ಭಟ್, ಕಾಸರಗೋಡಿನ ಸಹಕಾರಿ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕಿ ಜಾನ್ಸಿ ಕೆ.ಪಿ ಮತ್ತು ಮಂಜೇಶ್ವರ ವಿಭಾಗದ ಸಹಕಾರಿ ಸಹಾಯಕ ನಿಬಂಧಕ (ಸಾಮಾನ್ಯ) ರಾಜಗೋಪಾಲನ್. ಕೆ. ಸನ್ಮಾನಿಸಿದರು.