HEALTH TIPS

ಮಲೆನಾಡು ಹೆದ್ದಾರಿ ಮೂರು ವರ್ಷಗಳೊಳಗೆ ಪೂರ್ಣ


    ಮಂಜೇಶ್ವರ: ಕಾಸರಗೋಡು ಜಿಲ್ಲೆಯ ನಂದಾರಪದವಿನಿಂದ ಆರಂಭಗೊಂಡು ತಿರುವನಂತಪುರದ ಪಾರಶಾಲೆ ತನಕದ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಮಲೆನಾಡು ಹೆದ್ದಾರಿ ನಿರ್ಮಾಣ ಕೆಲಸಗಳನ್ನು ಮೂರು ವರ್ಷದೊಳಗಾಗಿ ಪೂರ್ತಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಖಾತೆ ಸಚಿವ ಜಿ.ಸುಧಾಕರನ್ ತಿಳಿಸಿದ್ದಾರೆ.
     ಈ ಮಲೆನಾಡ ಹೆದ್ದಾರಿ ರಾಜ್ಯದ ಹದಿಮೂರು ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. 12 ಮೀಟರ್ ಅಗಲದಲ್ಲಿ  ರಸ್ತೆ  ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ  ಅರಣ್ಯ ಪ್ರದೇಶಗಳನ್ನು  ಹೊರತುಪಡಿಸಿ 750 ಕಿ.ಮೀ. ಉದ್ದಕ್ಕೆ 9 ಜಿಲ್ಲೆಗಳ ಅರಣ್ಯ ಪ್ರದೇಶಗಳ ಮೂಲಕವೂ ಈ ರಸ್ತೆ  ಹಾದು ಹೋಗಲಿದೆ. ಅರಣ್ಯ ಪ್ರದೇಶಗಳ ಮೂಲಕ ರಸ್ತೆ  ನಿರ್ಮಿಸಲು ಕೇಂದ್ರ ಅರಣ್ಯ ಮತ್ತು  ಪರಿಸರ ಸಚಿವಾಲಯದ ಅನುಮತಿ ಅಗತ್ಯವಿದೆ ಎಂದು ಅವರು ತಿಳಿಸಿದರು.
    ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶಗಳ 66.20 ಹೆಕ್ಟೇರ್ ಭೂಮಿಯೂ ಬೇಕಾಗುವುದು. ಅದಕ್ಕಾಗಿ ಆ ಸ್ಥಳ ಬಿಟ್ಟುಕೊಡುವಂತೆ ರಾಜ್ಯ ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತಿದೆ ಎಂದೂ ಸಚಿವರು ಹೇಳಿದರು. ಮಲೆನಾಡು ಹೆದ್ದಾರಿಯ ನಿರ್ಮಾಣ ಕೆಲಸಕ್ಕೆ  ಈ ವರ್ಷ ಚಾಲನೆ ನೀಡಲಾಗುವುದೆಂದೂ, ಕೇರಳ ಇನ್‍ಫ್ರಾಸ್ಟ್ರಕ್ಚರ್ ಇನ್‍ವೆಸ್ಟ್‍ಮೆಂಟ್ ಫಂಡ್ ಬೋರ್ಡ್ (ಕಿಫ್‍ಬಿ- ಕೇರಳ ಮೂಲ ಸೌಕರ್ಯ ಹೂಡಿಕೆ ನಿಗಮ) 878.40 ಕೋಟಿ ರೂ. ಮಂಜೂರು ಮಾಡಿದೆ ಎಂದೂ ಸಚಿವರು ತಿರುವನಂತಪುರದಲ್ಲಿ ಸುದ್ದಿಗಾರರಿಗೆ  ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries