ಕಾಸರಗೋಡು: 36 ನೇ ಅಖಿಲ ಭಾರತ ಶ್ರೀಮದ್ ಭಾಗವತ ಸತ್ರ ಇದರ ಅಂಗವಾಗಿ ಸ್ವರ್ಣ ವಿಗ್ರಹ ರಥ ಯಾತ್ರೆ ಗೋಕರ್ಣದಿಂದ ಆರಂಭಿಸಿ ಪತ್ತನಂತಿಟ್ಟದ ಅಡೂರು ಮನ್ನಾಡಿ ಶಿವ ಕ್ಷೇತ್ರದಲ್ಲಿ ಸಮಾಪನಗೊಳ್ಳಲಿದೆ. ರಥ ಯಾತ್ರೆಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಆಡಳಿತ ಸಮಿತಿ ವತಿಯಿಂದ ಬುಧವಾರ ಭವ್ಯ ಸ್ವಾಗತ ನೀಡಲಾಯಿತು. ಯಾತ್ರೆಯ ನೇತೃತ್ವವನ್ನು ರತೀಶ್ ಕೋಯಿಕ್ಕೋಡ್ ವಹಿಸಿದ್ದಾರೆ.