HEALTH TIPS

ಸಾಧಕ ವಿದ್ಯಾರ್ಥಿಗಳ ಹುಡುಕಿ ಬಹುಮಾನ ಸಹಿತ ಹಾಸ್ಟೆಲ್ ಗೆ ಆಗಮಿಸಿದ ಶಾಸಕ

       
     ಕಾಸರಗೋಡು: ಸಾಧಕ ವಿದ್ಯಾರ್ಥಿಗಳಿಗಾಗಿ ಬಹುಮಾನಗಳ ಸಹಿತ ಶಾಸಕ ಎನ್.ಎ.ನೆಲ್ಲಿಕುನ್ನು ಹಾಸ್ಟೆಲ್ ಗೆ ಆಗಮಿಸಿದುದು ಅಲ್ಲಿನ ಮಂದಿಗೆ ಏಕಕಾಲಕ್ಕೆ ಅಚ್ಚರಿ ಮತ್ತು ಸಂತಸ ನೀಡಿದೆ.
       ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಸ್ವಾಮ್ಯದಲ್ಲಿ ಕಾಸರಗೋಡು ಬ್ಲಾಕ್, ನಗರಸಭೆ ವ್ಯಾಪ್ತಿಯ ಮೂರು ಪ್ರೀಮೆಟ್ರಿಕ್ ಹಾಸ್ಟೆಲ್ ಗಳಿಗೆ ಶಾಸಕ ಈ ರೀತಿ ಭೇಟಿ ಕೊಟ್ಟರು. ಇಲ್ಲಿನ ನಿವಾಸಿಗಳಾಗಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಮಕ್ಕಳನ್ನು ಅಭಿನಂದನೆ ನಡೆಸುವ ಉದ್ದೇಶದಿಂದ ಬಹುಮಾನಗಳ ಸಹಿತ ಅವರು ಬಂದಿದ್ದರು.   
   ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಬದಿಯಡ್ಕ ಹಾಸ್ಟೆಲ್ ನಲ್ಲಿ ಕಲಿತ 4 ಮಂದಿ ವಿದ್ಯಾರ್ಥಿಗಳಿಗೆ , ಕಾಸರಗೋಡು ನಗರಸಭೆ ವ್ಯಾಪ್ತಿಯ ಹುಡುಗರ ಹಾಸ್ಟೆಲ್ ನ 18 ವಿದ್ಯಾರ್ಥಿಗಳಿಗೆ ಅವರು ಬಹುಮಾನವಿತರಿಸಿ ಅಭಿನಂದಿಸಿದರು. ಸಮಾಜದಲ್ಲಿ ಹಿಂದುಳಿದಿರುವ ಜನಾಂಗದ ಮಕ್ಕಳ ಭವಿತವ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಈ ಹಾಸ್ಟೆಲ್ ಗಳ ಚಟುವಟಿಕೆ ಅಭಿನಂದನಾರ್ಹ ಎಂದವರು ಈ ವೇಳೆ ತಿಳಿಸಿದರು.
      ಎಸ್.ಸಿ.ಡಿ.ಒ.ಬಶೀರ್ ಪಿ.ಬಿ., ವಾರ್ಡನ್ ಗಳಾದ ಟಿ.ಕುಂ??ರಾಮನ್, ಸುಮ, ಮಧು, ಧನೇಶ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries