HEALTH TIPS

ಕನ್ನಡದಲ್ಲಿ ಮಾಹಿತಿ ಇಲ್ಲ: ಚುನಾವಣಾ ಆಯೋಗಕ್ಕೆ ದೂರು


     ಕಾಸರಗೋಡು: ಭಾರತೀಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಕಾಸರಗೋಡು, ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ಕನ್ನಡದಲ್ಲಿ ಮತದಾರ ಚೀಟಿ, ಪಟ್ಟಿ, ನೋಟೀಸು, ಸೂಚನೆಗಳು ಮೊದಲಾದವುಗಳನ್ನು ನೀಡುವುದಾಗಿ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಉತ್ತರಿಸಿದರೂ ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದರ ವಿರುದ್ಧ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾಧಿಕಾರಿಗಳು ಹಾಗೂ ಕೇಂದ್ರ ಭಾಷಾ ಅಲ್ಪಸಂಖ್ಯಾಕ ಆಯೋಗಕ್ಕೆ ಕಾಸರಗೋಡು ಕನ್ನಡಿಗರು ದೂರು ಸಲ್ಲಿಸಿದ್ದಾರೆ.
     ಪ್ರಜಾಪ್ರಭುತ್ವದ ಹೊಸ್ತಿಲಾದ ಚುನಾವಣೆಯಲ್ಲೂ ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಕಾಸರಗೋಡು, ಮಂಜೇಶ್ವರ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿರಲು ಸಾಮಾನ್ಯ ಮತದಾರರಿಗೆ ಅವರ ಭಾಷೆಯಲ್ಲಿ ಮಾಹಿತಿಯನ್ನು ನೀಡದಿರುವುದು ಕೂಡ ಕಾರಣವಾಗಿದೆ. ಕನ್ನಡದಲ್ಲಿ ಮಾಹಿತಿ ನೀಡುವ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಕೈಕೆಳಗಿನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡದೆ ಕಾಟಾಚಾರದ ನೀತಿಯನ್ನು ಅನುಸರಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿ ನೀಡದಿರಲು ನಾನಾ ರೀತಿಯ ನೆವನಗಳನ್ನೊಡ್ಡುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕಾಸರಗೋಡು, ಮಂಜೇಶ್ವರ ಮಾತ್ರವಲ್ಲದೆ ಕನ್ನಡಿಗರು ವಾಸವಾಗಿರುವ ಉದುಮ, ಕಾಂಞಂಗಾಡು ಕ್ಷೇತ್ರಗಳಲ್ಲೂ ಕನ್ನಡದಲ್ಲಿ ಮಾಹಿತಿ ನೀಡಬೇಕು. ಕಾಸರಗೋಡು, ಮಂಜೇಶ್ವರ ಕ್ಷೇತ್ರಗಳಲ್ಲಿ  ಪ್ರತಿಯೊಂದು ಮತಗಟ್ಟೆಗಳಲ್ಲಿ ಕನಿಷ್ಠಪಕ್ಷ ಒಬ್ಬರಾದರೂ ಕನ್ನಡ ಬಲ್ಲ ಚುನಾವಣಾಧಿಕಾರಿಗಳನ್ನು ನೇಮಿಸಬೇಕು. ಚುನಾವಣಾ ಆಯೋಗದ ಜಾಲತಾಣದಲ್ಲಿ ಕನ್ನಡದಲ್ಲೂ ಮತದಾರ ಪಟ್ಟಿ ಪ್ರಕಟಿಸಬೇಕು. ಮತದಾರರಿಗೆ ಸೂಚನೆ ನೀಡುವ ಭಿತ್ತಿಪತ್ರಗಳನ್ನು ಕನ್ನಡದಲ್ಲೂ ಮುದ್ರಿಸಿ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries