ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಲೋಕಕಲ್ಯಾಣಾರ್ಥವಾಗಿ ವಿಶೇಷ ಆಶ್ಲೇಷ ಪೂಜೆ ಹಾಗೂ ಬಲಿವಾಡು ಕೂಟವು ಜರಗಿತು.
ಮಧ್ಯಾಹ್ನ ಮಹಾಪೂಜೆಯ ನಂತರ ಕ್ಷೇತ್ರದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ವರುಣ ದೇವನು ಕೃಪೆದೋರಿ ನಾಡಿನ ದುರಿತಗಳನ್ನು ದೂರಮಾಡಬೇಕೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು. ಪಾಲ್ಗೊಂಡ ನೂರಾರು ಭಕ್ತಾದಿಗಳು ಪ್ರಸಾದ, ಭೋಜನ ಪ್ರಸಾದ ಸ್ವೀಕರಿಸಿದರು.