ಅಹ್ಮದಾಬಾದ್: ರಾಫೆಲ್ ಡೀಲ್ ಗೆ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಹಾಗೂ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ವಿರುದ್ಧ ಅಹ್ಮದಾಬಾದ್ ಕೋರ್ಟ್ ನಲ್ಲಿ ದಾಖಲಿಸಿದ್ದ 5 ಸಾವಿರ ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಹಿಂಪಡೆಯಲು ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ನಿರ್ಧರಿಸಿದೆ.
ಅಹ್ಮದಾಬಾದ್ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಧೀಶ ಪಿ ಜೆ ತಮಕುವಾಲಾ ಅವರು ಈ ಸಿವಿಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು.
ಪ್ರತಿವಾದಿಗಳಿಗೆ ನಾವು ಮಾನಹಾನಿ ಪ್ರಕರಣವನ್ನು ಹಿಂಪಡೆಯುತ್ತಿವುದಾಗಿ ತಿಳಿಸಿದ್ದೇವೆ ಎಂದು ದೂರದಾರರ ಪರ ವಕೀಲ ರಸೇಶ್ ಪಾರಿಖ್ ಅವರು ನಿನ್ನೆ ಸುದ್ದಿಗಾರರಿಗೆ ತಿಳಿಸಿದ್ದಾರೆ.