ಮುಳ್ಳೇರಿಯ: ಮನುಷ್ಯನ ಜೀವನವನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾಗಿದ್ದು, ಹಂತ ಹಂತವಾಗಿ ಆಕೆ ಮಕ್ಕಳಿಗೆ ನೀಡಬೇಕಾದ ವಾತ್ಸಲ್ಯಮಯಿಯಾಗಿಯೂ, ಶಿಕ್ಷೆಯಿಂದಲೂ, ಗೆಳೆತನದಿಂದಲೂ ಸಾಕಿ ಸಲಹಬೇಕಾಗಿದೆ. ಆಗ ಮಕ್ಕಳು ಉತ್ತಮ ಭಾರತದ ಪ್ರಜೆಯಾಗಿ ಬಾಳಬಹುದಾಗಿದೆ. ಮಕ್ಕಳ ನಿಯಂತ್ರಣ ತಂದೆ-ತಾಯಿಯಲ್ಲಿರಬೇಕು ಎಂದು ಕುಂಡಂಗುಳಿ ಹರಿಶ್ರೀ ವಿದ್ಯಾಲಯದ ಶಿಕ್ಷಕಿ ಇಂದಿರಾ ಕುಟ್ಟಿ ಟೀಚರ್ ಹೇಳಿದರು.
ಅವರು ಕುಂಡಂಗುಳಿ ಜಾಲುಮನೆ ಕೋಟೆಬಯಲು ವಾಗ್ಮಾನ್ ದೇವರಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕುಲಗುರು ತಾನೋಜಿ ರಾವ್ ವಾಗ್ಮಾನ್ ಅವರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಮೋಜಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುಂಡೂರು ಇವರಿಂದ ಮಕ್ಕಳ ಯಕ್ಷಗಾನ ಶಾಂಭವಿ ವಿಲಾಸ ನಡೆಯಿತು. ಬುಧವಾರ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ವೈಭವ, ಭಜನೆ, ಹರಿಶ್ರೀ ವಿದ್ಯಾಲಯ ಕುಂಡಂಗುಳಿ ಇವರಿಂದ ಯೋಗ ಪ್ರದರ್ಶನ, ವಿವೇಕಾನಂದ ನಾಟ್ಯ ನಿಲಯ ಕುಂಟಾರು ಇವರಿಂದ ಭರತನಾಟ್ಯ, ದೈವಜ್ಞ ಬೇಳ ಪದ್ಮನಾಭ ಶರ್ಮ ಇವರಿಂದ ಅನುಗ್ರಹ ಆಶೀರ್ವಚನ ನಡೆಯಿತು.