ಉಪ್ಪಳ: ಅರ್ಬುದ ರೋಗವು ಇಂದು ವ್ಯಾಪಕ ಕಳವಳಗಳಿಗೆ ಕಾರಣವಾಗಿ ಜನಸಾಮಾನ್ಯರನ್ನು ದಿಕ್ಕೆಡಿಸುತ್ತಿದೆ. ಆದರೆ ರೋಗದ ಪ್ರಾರಂಭಿಕ ಕಾಲದಲ್ಲೇ ಸೂಕ್ತ ಚಿಕಿತ್ಸೆ ದೊರೆತಲಲಿ ಸಂಪೂರ್ಣ ಗುಣಪಡಿಸಬಹುದಾಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎಕೆಎಂ ಅಶ್ರಫ್ ತಿಳಿಸಿದರು.
ಉಪ್ಪಳದ ಕ್ಯಾನ್ಸರ್ ಕೇರ್ ಫೌಂಡೇಶನ್, ಮಲಬಾರ್ ಕ್ಯಾನ್ಸರ್ ಸೆಂಟರ್ ಜಂಟಿ ಆಶ್ರಯದಲ್ಲಿ ಉಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡ ಕ್ಯಾನ್ಸರ್ ರೋಗ ಜಾಗೃತಿ ಕೇಂದ್ರ,ತಿಳಿವಳಿಕಾ ತರಗತಿ ಮತ್ತು ಕ್ಯಾನ್ಸರ್ ಅವಯವಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಲಬಾರ್ ಕ್ಯಾನ್ಸರ್ ಸೆಂಟರ್ ನ ವೈದ್ಯಾಧಿಕಾರಿ ಡಾ.ಫಿಲಿಪ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಕುಂಬಳೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಗ್ರಾ.ಪಂ. ಸದಸ್ಯ ಮೊಹಮ್ಮದ್ ಉಪ್ಪಳಗೇಟ್, ಮಜೀದ್ ಪಚ್ಚಂಬಳ, ರಿಶಾದ್ ಉಪ್ಪಳ, ಅಶ್ರಫ್, ಮೂಸಾ, ನಾಸರ್ ಹಿದಾಯತ್ ನಗರ, ಮೊಹಮ್ಮದ್ ಕೈಕಂಬ, ಮೊಹಮ್ಮದ್ ಉಪ್ಪಳ ಗೇಟ್ ಮೊದಲಾದವರು ಉಪಸ್ಥಿತರಿದ್ದರು. ಉಪ್ಪಳ ಕ್ಯಾನ್ಸರ್ ಕೇರ್ ಸೆಂಟರಿನ ಅಧ್ಯಕ್ಷ ಹಿಂದೂಸ್ಥಾನ್ ಮೋಣು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿದ್ದೀಕ್ ಕೈಕಂಬ ಸ್ವಾಗತಿಸಿ, ಅಬೂ ತಮಾಂ ವಂದಿಸಿದರು. ಉಪ್ಪಳ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಲಾದ ಕ್ಯಾನ್ಸರ್ ಸಂಬಂಧಿ ಪ್ರದರ್ಶನವನ್ನು ನೂರಾರು ಜನರು ವೀಕ್ಷಿಸಿದರು.