HEALTH TIPS

ಬಾಯಾರು ಹಿರಣ್ಯ ಶ್ರೀಕ್ಷೇತ್ರದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಮೆರವಣಿಗೆ, ತಂತ್ರಿಗಳ ಆಗಮನದೊಂದಿಗೆ ವಿದ್ಯುಕ್ತ ಚಾಲನೆ


          ಉಪ್ಪಳ: ಬಾಯಾರು ಹಿರಣ್ಯದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಂಗಳವಾರದಿಂದ ಆರಂಭಗೊಂಡಿದ್ದು, ಮೇ. 17ರ  ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ ಅವರ  ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
       ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಅಪರಾಹ್ನ 4ಕ್ಕೆ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹಿರಣ್ಯ ಕ್ಷೇತ್ರಕ್ಕೆ ಹೊರಟಿತು. ಸಂಜೆ 4ಕ್ಕೆ ಹಿರಣ್ಯ ಶ್ರೀಕ್ಷೇತ್ರಕ್ಕೆ  ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಶಿಲ್ಪಿಗಳಿಂದ ನೂತನ ಆಲಯ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ, ಸಮೃದ್ಧಿ ಉಗ್ರಾಣ ಮುಹೂರ್ತ,ಆಚಾರ್ಯವರಣ, ಪ್ರಾಸಾದ ಪರಿಗ್ರಹ,ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ,ಪುಣ್ಯಾಹವಾಚನ, ಅಸ್ತ್ರ ಕಲಶಪೂಜೆ,ರಾಕ್ಷೋಘ್ನ ಹೋಮ,ವಾಸ್ತು ಹೋಮ, ಪ್ರಾಸಾದ ವಾಸ್ತು ಪೂಜೆ, ವಾಸ್ತುಬಲಿ, ಪ್ರಾಕಾರಬಲಿ, ವಾಸ್ತು ಪುಣ್ಯಾಹ ಮೊದಲಾದ ವಿಧಿವಿಧಾನಗಳು ನಡೆಯಿತು.
       ಇಂದಿನ ಕಾರ್ಯಕ್ರಮ:  ಬುಧವಾರ ಪ್ರಾತ:ಕಾಲ 6 ಗಂಟೆಗೆ ಪುಣ್ಯಾಹವಾರ್ಚನೆ, ಗಣಪತಿ ಹೋಮ , ಪ್ರಾಯಶ್ಚಿತ ಹವನಗಳು, ಸುವಾಸಿನಿ ಪೂಜೆ, ಕನ್ನಿಕಾ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 12.30 ಕ್ಕೆ ಅನ್ನಪೂರ್ಣ ಛತ್ರದಲ್ಲಿ ಪ್ರಸಾದ ಭೋಜನ ನಡೆಯಲಿದೆ.ಸಂಜೆ 6 ಕ್ಕೆ ದೀಪಾರಾಧನೆ, ತ್ರಿಕಾಲಪೂಜೆ, ಜಲಶುದ್ಧಾದಿ ಕ್ರಿಯೆಗಳು, ಮಂಟಪ ಸಂಸ್ಕಾರ ಹಾಗೂ ಮಹಾಪೂಜೆ ನಡೆಯಲಿದೆ.
        ಗುರುವಾರ ಪ್ರಾತ:ಕಾಲ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲಪೂಜೆ, ಅನುಜ್ಞಾಕಲಶ ಪೂಜೆ,ಅನುಜ್ಞಾ ಕಲಶಾಭಿಷೇಕ,ಕುಂಭೇಶ, ಕರ್ಕರೀ ಪೂಜೆ, ನಿದ್ರಾಕಲಶ ಪೂಜೆ, ಶಯ್ಯೋಪೂಜೆ, ವಿದೆಯೀಶ್ವರ ಕಲಶಪೂಜೆ, ತತ್ತ್ವ ಕಲಶ ಪೂಜೆ, ತತ್ವಹೋಮ, ಜೀವಕಲಶಪೂಜೆ, ಜೀವಕಲಶ ಶಯ್ಯೋಗಮನ, ಶಯ್ಯೆಯಲ್ಲಿ ಪೂಜೆ, ತ್ರಿಕಾಲ ಪೂಜೆ ಹಾಗೂ ಮಧ್ಯಾಹ್ನ 12.30 ಕ್ಕೆ ಪ್ರಸಾದಭೋಜನ ನಡೆಯಲಿದೆ. 6 ಗಂಟೆಗೆ ದೀಪಾರಾಧನೆ, ತ್ರಿಕಾಲಪೂಜೆ, ಬ್ರಹ್ಮಕಲಶಪೂಜೆ, ಪರಿಕಲಶ ಪೂಜೆ, ಅಧಿವಾಸ ಹೋಮ, ಮಂಡಲಪೂಜೆ, ಪೀಠಾಧಿವಾಸ ಕ್ರಿಯೆಗಳು, ಧ್ಯಾನಾಧಿವಾಸ, ಕಲಶಾಧಿವಾಸ ನಡೆಯಲಿದೆ.
       ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಂಜೆ 5.30 ಕ್ಕೆ ಕುಣಿತ ಭಜನೆ ನಡೆಯಿತು. ಇಂದು ಬುಧವಾರ ಸಂಜೆ 3.30 ರಿಂದ ಅರವಿಂದ ಆಚಾರ್ಯ ಮಾಣಿಲ ಇವರ ಸಾರಥ್ಯದಲ್ಲಿ ಭಜನಾ ಸಂಧ್ಯಾ, 5.30 ರಿಂದ ಮೂಕಾಂಬಿಕ ಮಕ್ಕಳ ಭಜನಾ ತಂಡ ಬೆರಿಪದವು ಇವರಿಂದ ಕುಣಿತ ಭಜನೆ, ರಾತ್ರಿ 7.00 ರಿಂದ ಹೆದ್ದಾರಿ ಎ ಯು ಪಿ ಶಾಲೆಯ ಮಕ್ಕಳಿಂದ ಭರತನಾಟ್ಯ ಹಾಗೂ ರಾತ್ರಿ 9. ರಿಂದ ಜಿ ಕೆ ನಾವಡ ಬಾಯಾರು ಅವರ ಸಾರಥ್ಯದಲ್ಲಿ ದೇವೀ ಮಹಾತ್ಮೆ ಎಂಬ ಯಕ್ಷಗಾನ ನಡೆಯಲಿದೆ. ಗುರುವಾರ ಸಂಜೆ ಜೈ ಗುರುದೇವ ಮಹಿಳಾ ಭಜನಾ ಮಂದಳಿ ಒಡಿಯೂರು ಇವರಿಂದ ಕುಣಿತ ಭಜನೆ ಹಾಗೂ ರಾತ್ರಿ 9. ರಿಂದ ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯ್ಲ ಅಭಿನಯದ ಸುರೇಶ್ ಕುಲಾಲ್ ಬೀಸಿ ರೋಡ್( ಚಾಪರ್ಕ) ನಿರ್ದೇಶನದ, ಪುರುಷೋತ್ತಮ ಕೊಯ್ಲ ಕಥೆ , ಸಂಭಾಷಣೆ ಸಾರಥ್ಯದ ತುಳು ಹಾಸ್ಯಮಯ ನಾಟಕ ಇನಿಮುಟ್ಟ ಇಂಚಾತಿಜಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries