ಕಾಸರಗೋಡು: ಅಂತಾರಾಷ್ಟ್ರೀಯ ಚೈಲ್ಡ್ ಹೆಲ್ಪ್ ಲೈನ್ ದಿನದ ಅಂಗವಾಗಿ ಚೈಲ್ಡ್ ಲೈನ್ ನಂಬ್ರ 1098 ಜನತೆಗೆ ತಲಪಿಸುವ ನಿಟ್ಟಿನಲ್ಲಿ ವಾಹನ ಪ್ರಚಾರ ಸಂಚಾರ ನಡೆಯಲಿದೆ.
ಮಕ್ಕಳ ಸಂರಕ್ಷಣೆಯಲ್ಲಿಎಲ್ಲರಿಗೂ ಸಮಾನ ಹೊಣೆಗಾರಿಕೆಯಿದೆ ಎಂಬ ಜಾಗೃತಿಮೂಡಿಸುವ ನಿಟ್ಟಿನಲ್ಲಿ ಈ ಪರ್ಯಟನೆ ನಡೆಯಲಿದೆ.
ಮಕ್ಕಳ ಸಂರ್ಷಣೆಗಾಗಿ 24 ತಾಸುಗಳು ಚಟುವಟಿಕೆ ನಡೆಸುವ ಕೇಂದ್ರ ಮಹಿಳಾ ಶಿಶು ಅಭಿವೃದ್ಧಿ ಮಂತ್ರಾಲಯದ ಸೇವಾ ಯೋಜನೆಯಾಗಿ ಚೈಲ್ಡ್ ಲೈನ್ ಅನುಷ್ಠಾನಗೊಂಡಿದೆ.
ಕಾಸರಗೋಡು ಚೈಲ್ಡ್ ಲೈನ್ ಆಶ್ರಯದಲ್ಲಿ ಅಲಂಕರಿಸಿದ ವಾಹನದಲ್ಲಿ ಕಾಸರಗೋಡಿನಿಂದ ಚೆರ್ಕಳ ವರೆಗೆ ಪರ್ಯಟನೆ ನಡೆಯಲಿದೆ. ಈ ಪ್ರಚಾರದ ಉದ್ಘಾಟನೆ ಶನಿವಾರ ಹೊಸ ಬಸ್ ನಿಲ್ದಾಣ ಬಳಿ ನಡೆಯಿತು. ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿಲ್ಪಾ ಅವರು ಉದ್ಘಾಟಿಸಿದರು. ಸಿ.ಡಬ್ಲ್ಯೂ.ಸಿ.ಅಧ್ಯಕ್ಷೆ ನ್ಯಾಯವಾದಿ ಶ್ಯಾಮಲಾದೇವಿ, ಚೈಲ್ಡ್ ಲೈನ್ ನೋಡೆಲ್ ನಿರ್ದೇಶಕ ರೆ.ಫಾ.ಮ್ಯಾಥ್ಯೂ ಸ್ಯಾಮುವೆಲ್, ಜಿಲ್ಲಾ ಸಂಚಾಲಕ ಅನೀಷ್ ಜೋಸ್, ಘಟಕ ಸಂಯೋಜಕ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.