ಕಾಸರಗೋಡು: ಬೀರಿ ಕುಳಂನ ಕಾಲಿಚ್ಚಾನಡ್ಕ ಪರಪ್ಪ ರಸ್ತೆ ಅತ್ಯಂತ ಶೋಚನೀಯ ಸ್ಥಿತಿ ಯಲ್ಲಿದ್ದು, ಜಿಲ್ಲಾ ಪಂಚಾಯತ್‍ನ ಅವಗಣನೆಯ ವಿರುದ್ಧ ಡಿವೈಎಫ್‍ಐ ಹೋರಾಟಕ್ಕೆ ಸಜ್ಜಾಗಿದೆ.
ಹೊಂಡ ಗುಂಡಿಯಿಂದಾಗಿ ರಸ್ತೆ ಶೋಚನೀಯ ಸ್ಥಿತಿಗೆ ತಲುಪಿದ್ದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯನ್ನು ದುರಸ್ತಿಗೊಳಿಸದಿರುವ ಜಿಲ್ಲಾ ಪಂಚಾಯತ್‍ನ ಅವಗಣನೆಯನ್ನು ಪ್ರತಿಭಟಿಸಿ ಡಿವೈಎಫ್‍ಐ ಬೀರಿಕುಳಂ ವಲಯ ಸಮಿತಿ ಹೋರಾಟ ನಡೆಸು ವುದಾಗಿ ಮುನ್ನೆಚ್ಚರಿಕೆ ನೀಡಿದೆ.
ಪ್ರಸ್ತುತ ರಸ್ತೆಯ ಮೂರು ಕಿ.ಮೀ. ನೀಳಕ್ಕೆ ಈ ಹಿಂದೆ ಮೆಕಾಡಂ ಟಾರಿಂಗ್ ಮಾಡಲಾಗಿತ್ತು. ಬಾಕಿ ಇರುವ 10 ಕಿ.ಮೀ. ರಸ್ತೆ ಸಂಪೂರ್ಣವಾಗಿ ಶೋಚನೀಯ ಸ್ಥಿತಿಗೆ ತಲುಪಿದೆ. ರಸ್ತೆಯುದ್ದಕ್ಕೂ ಹೊಂಡಗುಂಡಿ ನಿರ್ಮಾಣವಾಗಿದೆ. ಬಾಕಿಯಿರುವ ಭಾಗದಲ್ಲಿ ಮೂರು ಕಿ.ಮೀ.ನಂತೆ ಪ್ರತೀ ವರ್ಷ ಟಾರಿಂಗ್ ನಡೆಸಲಾಗುವುದೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದರು. ಆದರೆ ಭರವಸೆ ಈ ವರೆಗೂ ಈಡೇರಿಲ್ಲ. ಹೊಂಡಗುಂಡಿ ರಸ್ತೆಯಲ್ಲಿ ವಾಹನಗಳು ಬಿದ್ದು ಅಪಘಾತ ದಿನಾ ಘಟನೆಯಾಗಿದೆ.
ರಸ್ತೆಯುದ್ದಕ್ಕೂ ಹೊಂಡದಿಂದಾಗಿ ಸುಗಮ ವಾಹನ ಸಂಚಾರ ಸಾಧ್ಯವಾ ಗದೆ ವಾಹನಗಳು ಹೊಂಡಕ್ಕೆ ಬೀಳುತ್ತಿ ರುವುದರಿಂದ ವಾಹನಗಳ ಬಿಡಿ ಭಾಗಗಳು ಹಾನಿಯಾಗುತ್ತಿದ್ದು, ಇದರಿಂದ ವಾಹನಗಳಿಗೆ ಹಾನಿ ಉಂಟಾಗುತ್ತವೆ.
ಹಾನಿಗೀಡಾದ ವಾಹನಗಳ ದುರಸ್ತಿಗೆ ಬಾರೀ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ.ರಸ್ತೆ ಹೊಂಡಕ್ಕೆ ವಾಹನ ಬೀಳುವುದರಿಂದ ಜಲ್ಲಿಗಳು ಸಿಡಿದು ಪಾದಚಾರಿಗಳಿಗೂ ಬಡಿದು ಗಾಯಗೆuಟಿಜeಜಿiಟಿeಜಳ್ಳುತ್ತಿರುವ ಘಟನೆ ನಿತ್ಯಸಂಭವವಾಗಿದೆ.ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯದರ್ಶಿಗೆ ಡಿವೈಎಫ್‍ಐ ವಲಯ ಸಮಿತಿ ಮನವಿ ಮಾಡಿದೆ.
ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಡಿವೈಎಫ್‍ಐ ಮುನ್ನೆಚ್ಚರಿಕೆ ನೀಡಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಉಮೇಶ್ ಕಾಳಿಯಾನಂ ಅವರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಕೆ.ಮಣಿ, ಕೆ.ದಿಲೀಪ್, ವಿನೀಶ್, ಕೆ.ಎಂ.ಪ್ರದೀಪ್ ಕುಮಾರ್ ಮೊದಲಾದವರು ಮಾತನಾಡಿದರು.